ಮಂಗಳೂರು: ಶಿರಿಬಾಗಿಲು ಮತ್ತು ಎಡಕುಮಾರಿ ವಿಭಾಗದ ನಡುವೆ ರೈಲ್ವೆ ಟ್ರ್ಯಾಕ್ ಟ್ಯಾಂಪಿಂಗ್ ಹಾಗೂ ಮೆಟೀರಿಯಲ್ ರೈಲು ಕಾಮಗಾರಿ (ಲೈನ್ ಬ್ಲಾಕ್) ಕೈಗೆತ್ತಿಕೊಳ್ಳುತ್ತಿರುವುದರಿಂದ, ನೈಋತ್ಯ ರೈಲ್ವೆಯು ಯಶವಂತಪುರ - ಕಾರವಾರ - ಯಶವಂತಪುರ (ರೈಲು ಸಂಖ್ಯೆ 16515/16516) ವಾರಾಂತ್ಯದ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಮುಂದಿನ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ನಿರ್ದಿಷ್ಟ ದಿನಗಳಲ್ಲಿ ಸಂಪೂರ್ಣವಾಗಿ ರದ್ದುಗೊಳಿಸಿದೆ.