ಮಂಗಳೂರಿನ ಪೆರ್ಮುದೆ ಮತ್ತು ಉಡುಪಿಯ ಪಾದೂರಿನಲ್ಲಿ ಈಗಾಗಲೇ ಭೂಗತ ತೈಲ ಸಂಗ್ರಹಾಗಾರ ಕಾರ್ಯಾಚರಿಸುತ್ತಿದೆ. ಇದನ್ನು ದೇಶದಲ್ಲಿ ತುರ್ತು ಸನ್ನಿವೇಶಕ್ಕೆ ಬಳಕೆಗಾಗಿ ಕಚ್ಚಾ ತೈಲ ಸಂಗ್ರಹಕ್ಕೆ ಬಳಕೆಯಾಗುತ್ತಿದೆ. ಪೆರ್ಮುದೆಯ ಭೂಗತ ತೈಲ ಸಂಗ್ರಹಾಗಾರದ ಸಾಮರ್ಥ್ಯ 1.5 ಮಿಲಿಯನ್ ಮೆ.ಟನ್ ಆಗಿದ್ದು, 1,227 ಕೋಟಿ ರೂ.. ವೆಚ್ಚದಲ್ಲಿ ನಿರ್ಮಿಸಿದ್ದು 2016ರಲ್ಲಿ ಕಾರ್ಯಾರಂಭಿಸಿದೆ. ಪಾದೂರಿನ ತೈಲ ಸಂಗ್ರಹಾಗಾರ 2.50 ಮಿ.ಮೆ. ಟನ್ ಸಾಮರ್ಥ್ಯ ಹೊಂದಿದ್ದು, 1,693 ಕೋಟಿ ರೂ.ಗಳಲ್ಲಿ ನಿರ್ಮಿಸಿದ್ದು 2018 ರಲ್ಲಿ ಕಾರ್ಯಾರಂಭಿಸಿದೆ. ಸ್ಥಳೀಯ ಎಲ್‌ಪಿಜಿ ಪೂರೈಕೆದಾರರ ಮಾಹಿತಿಯಂತೆ ಕರಾವಳಿಯಲ್ಲಿ ಪ್ರಸ್ತುತ ಶೇ.15ರಷ್ಟು ಮಾತ್ರ ಕೊರತೆ ಇದೆ. ಮುಂದಿನ ದಿನ ಈ ಬಾಗದಲ್ಲಿ ತುರ್ತು ಸನ್ನಿವೇಶ ಎದುರಾದರೆ ಈ ಕಚ್ಚಾ ತೈಲ ಸಂಗ್ರಹಗಾರವೇ ಆಪತ್ಭಾಂದವವಾಗಿ ಕಾರ್ಯನಿರ್ವಹಿಸಲಿದೆ.