ನಾಗೇಂದ್ರ ಅವರ ಮೇಲೆ ಆರೋಪ ಬಂದಾಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಮಾರು ಒಂದೂವರೆ ವರ್ಷ ಕಾಲ ಸಂಪುಟದಿಂದ ಹೊರಗಿದ್ದರು. ವಂಚನೆಯಾಗಿದ್ದ 180 ಕೋಟಿ ರೂ.ನಲ್ಲಿ ಶೇ. 99.5ರಷ್ಟು ಹಣ ಸರ್ಕಾರಕ್ಕೆ ವಾಪಾಸಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಆಗಿದೆ. ಇದೀಗ ಸಿಬಿಐ ನೋಟೀಸು ನೀಡಿದೆ ಎಂಬ ಕಾರಣಕ್ಕೆ ಯಾರೂ ತಪ್ಪಿತಸ್ಥ ಎಂದು ಸಾಬೀತಾಗುವುದಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು. ಹಾಗೆ ಸಿಬಿಐ ನೋಟೀಸು ನೀಡಿದೆ ಎಂಬ ಕಾರಣಕ್ಕೆ ರಾಜೀನಾಮೆ ನೀಡುವುದಾದರೆ, ಬಿಜೆಪಿಯ ಅದೆಷ್ಟೋ ಮುಖ್ಯಮಂತ್ರಿ, ಸಚಿವರು ಇಂತಹ ತನಿಖೆಯನ್ನು ಎದುರಿಸುತ್ತಿದ್ದಾರೆ. ಅವರ ರಾಜೀನಾಮೆಗೆ ಒತ್ತಾಯಿಸುತ್ತಾರೆಯೇ ಎಂದು ಪ್ರಶ್ನಿಸಿದ ಯು.ಟಿ.ಖಾದರ್, ಬಿಜೆಪಿಯವರಿಗೊಂದು ನ್ಯಾಯ, ನಾಗೇಂದ್ರ ಅವರಿಗೊಂದು ನ್ಯಾಯ ಹೇಗಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.