ಟೈಲಸ್ಸ್ ಅಸೋಶಿಯೇಷನ್ 27ನೇ ವರ್ಷದ ವಾರ್ಷಿಕೋತ್ಸವ

 ಕರ್ನಾಟಕ ರಾಜ್ಯ ಟೈಲಸ್ಸ್ ಅಸೋಶಿಯೇಷನ್ ಮಂಗಳಾದೇವಿ ವಲಯ ಸಮಿತಿಯಿಂದ 27ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ವಿಶೇಷ ಪೂಜೆ ಗೋರಿಗುಡ್ಡದಲ್ಲಿರುವ ಪ್ರಧಾನ ಕಚೇರಿ ಟೈಲರ್ ಭವನದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಟೈಲಸ್ಸ್ ಅಸೋಶಿಯೇಷನ್ ಮಂಗಳಾದೇವಿ ವಲಯ ಸಮಿತಿಯಿಂದ 27ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ವಿಶೇಷ ಪೂಜೆ ಗೋರಿಗುಡ್ಡದಲ್ಲಿರುವ ಪ್ರಧಾನ ಕಚೇರಿ ಟೈಲರ್ ಭವನದಲ್ಲಿ ನಡೆಯಿತು.
Published on
ಮಂಗಳೂರು: ಕರ್ನಾಟಕ ರಾಜ್ಯ ಟೈಲಸ್ಸ್ ಅಸೋಶಿಯೇಷನ್ ಮಂಗಳಾದೇವಿ ವಲಯ ಸಮಿತಿಯಿಂದ 27ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಗೋರಿಗುಡ್ಡದಲ್ಲಿರುವ ಪ್ರಧಾನ ಕಚೇರಿ ಟೈಲರ್ ಭವನದಲ್ಲಿ ನಡೆಯಿತು.
ಕರ್ನಾಟಕ ಟೈಲರ್ ಅಸೋಸಿಯೇಷನ್ಸ್‌ನ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲೆಯ ಕ್ಷೇತ್ರ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಆಹ್ವಾನಿತರು ಕಾರ್ಯಕ್ರಮದಲ್ಲಿ ಪೂಜೆಯಲ್ಲಿ ಪಾಲ್ಗೊಂಡು. ಈ ಸಂದರ್ಭ ನಡೆದ ವಿಶೇಷ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಸಂಘದ 27 ವರ್ಷಗಳ ಸೇವಾ ಪಯಣವನ್ನು ಸ್ಮರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಂಘದ ಬೆಳವಣಿಗೆಗೆ ಸಹಕರಿಸಿದ ಹಿರಿಯ ಸದಸ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ವಾರ್ಷಿಕೋತ್ಸವ ಅಂಗವಾಗಿ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ನಳಿನಿ ಸದಾಶಿವ, ಕೋಶಾಧಿಕಾರಿ ಹರಿಣಾಕ್ಷಿ, ಜಿಲ್ಲಾ ಉಪಾಧ್ಯಕ್ಷರು ವಿಶ್ವನಾಥ್ ಬಜಾಲ್, ಪದಾಧಿಕಾರಿ ಅಶೋಕ್, ಸಬಿತಾ ಸತೀಶ್, ಸುಜಾತಾ ಜೋಗಿ, ಹಿರಿಯ ಸದಸ್ಯರು ಸೀತಾರಾಮ್ ಅಮೀನ್, ಪದ್ಮನಾದ್ಭ ಜಲ್ಲಿಗುಡ್ಡೆ, ವಲಯ ಉಪಾಧ್ಯಕ್ಷರು ಅನಾಂತ್ ರಾಮ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net