ಈ ಮೊದಲು ಬೆಂಗಳೂರು ಹಾಗೂ ಮೈಸೂರಿನಿಂದ ಆರಂಭವಾಗುತ್ತಿದ್ದ ಈ ಜನಪ್ರಿಯ ಯಾತ್ರೆ ಈ ಬಾರಿ ಮೊದಲ ಬಾರಿಗೆ ಮಂಗಳೂರಿನಿಂದ ಚಾಲನೆಗೊಳ್ಳುತ್ತಿದೆ. ಟಿಎಫ್‍ಎನ್‍ನಲ್ಲಿ 9 ಮಹಿಳೆಯರು ಮತ್ತು 18 ವಿದೇಶಿ ಸೈಕ್ಲಿಸ್ಟ್‍ಗಳು ಸೇರಿದಂತೆ 110 ಭಾಗವಹಿಸುವರು. ಸಮುದ್ರಮಟ್ಟದಿಂದ 13500 ಮೀಟರ್ ಎತ್ತರಕ್ಕೆ ಪ್ರಯಾಣ ಕೈಗೊಳ್ಳುವುದು ವಿಶೇಷ. ಪ್ರವಾಸದ ಉದ್ದಕ್ಕೂ ಸೈಕ್ಲಿಸ್ಟ್‍ಗಳಿಗೆ 53 ಮಂದಿ ಬೆಂಬಲ ಸಿಬ್ಬಂದಿ ಇರುತ್ತಾರೆ. ಕರ್ನಾಟಕ, ತಮಿಳುನಾಡು, ಕೇರಳ, ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ಎನ್‍ಸಿಆರ್, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಸೈಕ್ಲಿಸ್ಟ್‍ಗಳು ಈ ಬಾರಿ ಭಾಗವಹಿಸುತ್ತಿದ್ದು, ಡೆನ್ಮಾರ್ಕ್, ಐಲೆರ್ಂಡ್, ಇಟಲಿ, ಸಿಂಗಾಪುರ, ಯುಎಇ, ಬ್ರಿಟನ್ ಮತ್ತು ಅಮೆರಿಕದ ಯಾತ್ರಿಗಳು ಇದ್ದಾರೆ.