ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸ

 ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ಈ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ನಯಂತ್ರಣಕ್ಕೆ ಪೊಲೀಸರು ಸುಗಮ ಸಂಚಾರದ ಉದ್ದೇಶದಿಂದ ಸಿಗ್ನಲ್ ಲೈಟ್ ವ್ಯವಸ್ಥೆ ಮತ್ತೆ ಆರಂಭಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ಈ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ನಯಂತ್ರಣಕ್ಕೆ ಪೊಲೀಸರು ಸುಗಮ ಸಂಚಾರದ ಉದ್ದೇಶದಿಂದ ಸಿಗ್ನಲ್ ಲೈಟ್ ವ್ಯವಸ್ಥೆ ಮತ್ತೆ ಆರಂಭಿಸಿದ್ದಾರೆ.
Published on
ಮಂಗಳೂರು: ಕಳೆದ ಹಲವು ದಿನಗಳಿಂದ ಮಂಗಳೂರಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಬಹುತೇಕ ಸಂದರ್ಭ ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ಈ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚು. ಆಗಾಗ್ಗೆ ಅಪಘಾತಗಳು ಕೂಡ ಸಂಭವಿಸುತ್ತಿದ್ದವು. ಈ ಹಿಂದೊಮ್ಮೆ ಇಲ್ಲಿ ಸಿಗ್ನಲ್ ಲೈಟ್ ಇತ್ತು. ಅನಂತರ ಅದು ಸ್ಥಗಿತಗೊಂಡಿತ್ತು. ಇದೀಗ ಪೊಲೀಸರು ಸುಗಮ ಸಂಚಾರದ ಉದ್ದೇಶದಿಂದ ಸಿಗ್ನಲ್ ಲೈಟ್ ವ್ಯವಸ್ಥೆ ಮತ್ತೆ ಆರಂಭಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ 2 ನಿಮಿಷ, ಉಳಿದ ಕಡೆಗಳಿಂದ ಬರುವ ವಾಹನಗಳಿಗೆ ಒಂದು ನಿಮಿಷ ಕಾಲಾವಕಾಶ ನೀಡಲಾಗಿದೆ. ಪ್ರಾಯೋಗಿಕವಾಗಿ ಸಮಯ ನಿಗದಿಗೊಳಿಸಲಾಗಿದ್ದು ಇದನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
*ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸ
ಪಂಪ್‌ವೆಲ್ ವೃತ್ತದಿಂದ ಕಂಕನಾಡಿ ಹಳೆ ರಸ್ತೆ- ಕಂಕನಾಡಿ ವೃತ್ತದ ರಸ್ತೆ ಮತ್ತು ಕರಾವಳಿ ವೃತ್ತದಿಂದ ಪಂಪ್‌ವೆಲ್ ವೃತ್ತದವರೆಗಿನ ಬೈಪಾಸ್ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಿದ ಕಾರಣ ವಾಹನಗಳು ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ನಿರ್ದೇಶನ ನೀಡಲಾಗಿದೆ. ಈ ಬದಲಾವಣೆಯಿಂದಾಗಿ ನಂತೂರು, ಕೆಪಿಟಿ ಮಾರ್ಗದಲ್ಲಿ ದಿನದ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪಂಪ್‌ವೆಲ್ ಕಡೆಯಿಂದ ಕರಾವಳಿ ವೃತ್ತದೆಡೆಗೆ ಏಕಮುಖ ಸಂಚಾರ ಇರುವ ಕಾರಣ ಸಂಜೆಯ ಹೊತ್ತಿಗೆ ಇಲ್ಲಿ ಸಂಚಾರ ದಟ್ಟಣೆ ಸರ್ವೇ ಸಾಮನ್ಯ. ಈ ವೇಳೆ ಟ್ರಾಫಿಕ್ ಪೊಲೀಸರು ಸಂಚಾರ ನಿಯಂತ್ರಣಕ್ಕೆ ಹರಸಾಹಸ ಪಡುತ್ತಾರೆ.

ಸಿಗ್ನಲ್ ಲೈಟ್ ಪುನರಾರಂಭ

ಸಿಗ್ನಲ್ ಲೈಟ್‌ನಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿದೆ. ಸಮಯದಲ್ಲಿ ನಿಗದಿತ ಸ್ಥಳ ತಲುಪುವುದು ಅಸಾಧ್ಯವಾಗುತ್ತಿದೆ ಎಂದು ಕೆಲವು ಬಸ್ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್ ಸಿಗ್ನಲ್ ಪುನರ್ ಆರಂಭಿಸಲಾಗಿದ್ದು ಸದ್ಯ ಸಂಚಾರಿ ಪೊಲೀಸರು ಕೂಡ ಸ್ಥಳದಲ್ಲಿದ್ದು ವಾಹನಗಳಿಗೆ ಸೂಚನೆ ನೀಡುತ್ತಿದ್ದಾರೆ. ಆದಾಗ್ಯೂ ಕೆಲವು ವಾಹನ ಚಾಲಕರು ಗೊಂದಲಕ್ಕೀಡಾಗುತ್ತಿದಾದರೆ. ಇಲ್ಲಿ ಸಿಗ್ನಲ್ ವ್ಯವಸ್ಥೆಗೆ ಚಾಲಕರು ಹೊಂದಿಕೊಳ್ಳುವವರೆಗೆ ಗೊಂದಲವುಂಟಾಗಿ ಅಪಾಯವಾಗುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಸಂಖ್ಯೆಯ ಸಂಚಾರಿ ಪೊಲೀಸರನ್ನು ನಿಯೋಜಿಸುವ ಅಗತ್ಯವಿದೆ. ಸಿಗ್ನಲ್ ಲೈಟ್ ಪುನರಾರಂಭದ ನಡುವೆಯೇ ಕಳೆದ ವಾರ ಇಲ್ಲಿ ಒಂದು ಅಪಘಾತ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಿಗ್ನಲ್ ಲೈಟ್ ವ್ಯವಸ್ಥೆ

ಅಪಾಯಕಾರಿಯಾಗಿರುವ ನಂತೂರು ವೃತ್ತದಲ್ಲಿಯೂ ಸಿಗ್ನಲ್ ಲೈಟ್ ಪುನರ್‌ಆರಂಭಿಸಲು ಪೊಲೀಸರು ನಿರ್ಧರಿಸಿದ್ದು ಶೀಘ್ರದಲ್ಲೆ ಇಲ್ಲಿ ಕೂಡ ಪುನರ್ ಆರಂಭವಾಗುವ ನಿರೀಕ್ಷೆ ಇದೆ. ಈಗಾಗಲೇ ಪದುವ ಕ್ರಾಸ್, ಕೊಟ್ಟಾರ , ಕೂಳೂರು, ಪಣಂಬೂರು, ಜಪ್ಪಿನಮೊಗ್ರು ಸೇರಿದಂತೆ 23 ಕಡೆಗಳಲ್ಲಿ ಬ್ಲಿಂಕಿಂಗ್ ಸಿಗ್ನಲ್ ಲೈಟ್ ಅಳವಡಿಸಲಾಗಿದ್ದು, ಇಡೀ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಿಗ್ನಲ್ ಲೈಟ್ ವ್ಯವಸ್ಥೆಗೆ ಮೊದಲ ಹಂತದ ಳವಡಿಕೆ ಕಾರ್ಯ ಪೂರ್ಣಗೊಂಡಿದೆ.
"

ಈಗಾಗಲೇ ಸಂಚಾರ ನಿಯಂತ್ರಣ ಹಾಗೂ ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಿಗ್ನಲ್ ಲೈಟ್ ವ್ಯವಸ್ಥೆ ಮಾಡಿರುವ ಬಗ್ಗೆ ಇಲಾಖೆ ಮಾಹಿತಿ ನೀಡಿದೆ. ಜತೆಗೆ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಗೂ ಪಾಲಿಕೆ, ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಕೆಪಿಟಿ- ನಂತೂರ್ ಜಂಕ್ಷನ್‌ಗೆ ಸಂಚಾರ ಒತ್ತಡ ಹೆಚ್ಚಾಗುತ್ತಿದ್ದು, ಈಬಗಗೆ ಸೂಕ್ಷ್ಮರೀತಿಯಲ್ಲಿ ನಿರ್ವಹಣೆ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

---------------
"

ರಾಷ್ಟ್ರೀಯ ಹೆದ್ದಾರಿ 66ರನ್ನು ಅಫಘಾತ ರಹಿತ, ಟ್ರಾಫಿಕ್ ರಹಿತ ಸುಗಮ ಸಂಚಾರಕ್ಕೆ ಪೂರಕವಾಗಿ ಸಿಗ್ನಲ್ ಲೈಟ್ ಅಳವಡಿಕೆ ಮಾಡಲಾಗಿದೆ. ಈಗಾಗಲೇ ಇದರ ಸರ್ವೀಸ್ ರಸ್ತೆ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ಪೂರ್ವಭಾವಿ ಕೆಲಸಗಳು ಆರಂಭಿಸಲಾಗಿದೆ.ಇದರಿಂದ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗುವುದನ್ನು ತಡೆಯಲು ಸಿಗ್ನಲ್ ಲೈಟ್ ಅಳವಡಿಸಿ ಸಂಚಾರಿ ಸೂಚನೆ ನೀಡುವ ಕಾರ್ಯ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net