

ಟಿಕೇಟ್ ವ್ಯವಸ್ಥೆಯನ್ನು ಪೂರ್ಣಪ್ರಮಾಣದಲ್ಲಿ ಡಿಜಿಟಲೀಕರಣ ಮಾಡುವ ಮೂಲಕ ಟಿಕೆಟ್ ವಂಚನೆಗೆ ತಡೆಯುವುದು ಮತ್ತು ಮರಗಳ್ಳತನದ ಪ್ರಕರಣಗಳ ಮರು ಪರಿಶೀಲನೆ ನಡೆಸಲಾಗುವುದು.
ಪಿಲಿಕುಳದಲ್ಲಿ ಮರ ಕಳ್ಳತನ ಆಗಿರುವ ಸಂದರ್ಭ ಅರಣ್ಯ ಇಲಾಖೆಗೆ ದಾಖಲೆ ಸಹಿತ ದೂರು ನೀಡಿದ್ದ ಸಂದರ್ಭ ಸೆಕ್ಯೂರಿಟಿ ಅಧಿಕಾರಿ ಹಾಗೂ ನಿರ್ದೇಶಕರ ಮೇಲೆ ಎಫ್‌ಐಆರ್ ದಾಖಲಿಸುವ ಬದಲು ಅಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮನೋಜ್ ಎಂಬುವರ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಪಿಲಿಕುಳದೊಳಗಿನ ಟನ್‌ಗಟ್ಟಲೆ ಕಬ್ಬಿಣ ಸೇರಿದಂತೆ ಇತರೆ ವಸ್ತುಗಳ ವಿಲೇವಾರಿಗೆ ಟೆಂಡರ್ ನಡೆಯುವುದಿಲ್ಲ. ಇದನ್ನು ಇಲ್ಲಿನ ಸೆಕ್ಯೂರಿಟಿ ಅಧಿಕಾರಿ ದಯಾಸಾಗರ್ ಎಂಬುವರು ಗುಜುರಿಗೆ ಹೊರಗಡೆ ಸಾಗಿಸಲು ತನ್ನ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ.