ಕರ್ನಾಟಕದ ದೋಣಿಗೆ 2.5 ಲಕ್ಷ ರೂ. ದಂಡ

ಕೇರಳದ ಸಮುದ್ರದಲ್ಲಿ ಅನಧಿಕೃತ ಮೀನುಗಾರಿಕೆ
fine
fine
Published on: 

ಕಾಸರಗೋಡು: ಕೇರಳದ ಸಮುದ್ರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದ ಮತ್ತು ನಿಷೇಧಿತ ಲೈಟ್ ಫಿಶಿಂಗ್ ಮಾಡುತ್ತಿದ್ದ ಕರ್ನಾಟಕ ನೋಂದಾಯಿತ ‘ಬಲರಾಮ್’ ಎಂಬ ಹೆಸರಿನ ದೋಣಿಯನ್ನು ಮೀನುಗಾರಿಕಾ ಇಲಾಖೆಯ ಮರೈನ್ ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದೋಣಿ ಮಾಲೀಕಗೆ 2.5 ಲಕ್ಷ ರೂ. ದಂಡ ವಿಧಿಸಿದ್ದಾರೆ. ನೀಲೇಶ್ವರ ಐತ್ತಲ ಸಮುದ್ರದಲ್ಲಿ ಫಿಶರೀಸ್ ಎಕ್ಸ್‌ಟೆನ್ಶನ್ ಅಧಿಕಾರಿ ಸಂಗೀತ್ ಎ.ಕೆ. ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ.

ಲೈಟ್ ಫಿಶಿಂಗ್‌ಗಾಗಿ 1 ಸಾವಿರ ವ್ಯಾಟ್‌ನ ಎಂಟು ಲೈಟು ಹಾಗೂ 2 ಸಾವಿರ ವ್ಯಾಟ್‌ನ ಒಂದು ಲೈಟು ದೋಣಿಗೆ ಅಳವಡಿಸಿರುವುದನ್ನೂ ಪತ್ತೆಹಚ್ಚಲಾಗಿದೆ. ಕೇರಳ ಮರೈನ್ ಫಿಶಿಂಗ್ ರೆಗ್ಯುಲೇಟಿಂಗ್ ಆ್ಯಕ್ಟ್ ಪ್ರಕಾರ ನಿಷೇಧಿತ ಬೆಳಕಿನ ಬಳಕೆ ಹಾಗೂ ಗಡಿ ಉಲ್ಲಂಘಿಸಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದರ ವಿರುದ್ಧ 2.5 ಲಕ್ಷ ರೂ. ದಂಡ ವಿಧಿಸಿದೆ ಅಧಿಕಾರಿಗಳು ತಿಳಿಸಿದ್ದಾರೆ.