ಭತ್ತದ ಬೆಳೆ ನಾಶ-ರೈತ ಆತ್ಮಹತ್ಯೆ ಎಚ್ಚರಿಕೆ

ಫಲವತ್ತಾದ ಭತ್ತದ ಬೆಳೆ ನಾಶ ಮಾಡಲಾಗಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತನೊಬ್ಬ ಆತ್ಮಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಫಲವತ್ತಾದ ಭತ್ತದ ಬೆಳೆ ನಾಶ ಮಾಡಲಾಗಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತನೊಬ್ಬ ಆತ್ಮಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
Published on
ಮೂಡುಬಿದಿರೆ: ಫಲವತ್ತಾದ ಭತ್ತದ ಬೆಳೆ ನಾಶ ಮಾಡಲಾಗಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತನೊಬ್ಬ ಆತ್ಮಹತ್ಯೆ ಮಾಡುವುದಾಗಿ ಅಡಿಯೋ ಸಂದೇಶದಲ್ಲಿ ಎಚ್ಚರಿಕೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತ ಅಲ್ಫೋನ್ಸ್ ಡಿಸೋಜಾ ಅವರು ಈ ಕುರಿತು ಅಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ. ತಮ್ಮ ಗದ್ದೆಯಲ್ಲಿ ತೆನೆ ಬಿಡುವ ಹಂತದಲ್ಲಿದ್ದ ಭತ್ತದ ಬೆಳೆವನ್ನು ಕಂಪನಿ ಸಿಬ್ಬಂದಿ ಏಕಾಏಕಿ ಬಂದು ನಾಶ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಒಂದು ತಿಂಗಳು ಕಾಲಾವಕಾಶ ನೀಡಿ, ಬೆಳೆ ಕಟಾವು ಮಾಡಲು ಅವಕಾಶ ನೀಡಿರಿ ಎಂದು ವಿನಂತಿಸಿದರೂ ಸಹ ಕೇಳಿಸಿಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.
ಶನಿವಾರ ಮನೆಗೆ ಹಾಜರಿರದ ವೇಳೆ ಪೊಲೀಸ್ ಭದ್ರತೆಯೊಂದಿಗೆ ಬಂದ ಸಿಬ್ಬಂದಿ ತಮ್ಮ ಅಣ್ಣನ ಎದುರಲ್ಲೇ ಗದ್ದೆಗೆ ಪ್ರವೇಶಿಸಿ ಮರಗಳನ್ನು ಕಡಿದು, ಬೆಳೆ ಹಾನಿಗೊಳಿಸಿದ್ದಾರೆ ಎಂದು ಅವರು ದೂರಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಕೆಲಸ ತಾತ್ಕಾಲಿಕವಾಗಿ ನಿಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಿದ್ದರೂ, ತಮ್ಮ ಗೈರುಹಾಜರಿಯಲ್ಲಿ ಮತ್ತೆ ಕೆಲಸ ಮುಂದುವರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಯಾವುದೇ ಮುಂಚಿತ ನೋಟಿಸ್ ನೀಡದೇ, ಪರಿಹಾರ ಮೊತ್ತದ ಬಗ್ಗೆ ಮಾತುಕತೆ ನಡೆಸದೇ ಈ ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಫೊನ್ ಕರೆ ಸ್ವೀಕರಿಸದ ಕಮಿಷನರ್ ಸುಧೀರ್ ರೆಡ್ಡಿ

ನನಗೆ ಒಂದು ಕೋಟಿ ರೂ. ಪರಿಹಾರ ನೀಡಿದರೆ ಯಾವುದೇ ತಕರಾರು ಮಾಡುವುದಿಲ್ಲ ಎಂದು ತಿಳಿಸಿದ್ದರೂ, ಅದನ್ನು ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ. ಕಂಪನಿ ಅಧಿಕಾರಿಗಳು ಕೆಲಸ ನಿಲ್ಲಿಸಲು ಸಾಧ್ಯವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಮನನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ, ವಿಷ ಸೇವಿಸಲು ಗದ್ದೆ ಹತ್ತಿರವೇ ತಯಾರಾಗಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ವಿಷ ಸೇವಿಸುತ್ತೇನೆ, ತಾವು ಶುಗರ್ ರೋಗಿಯಾಗಿದ್ದು, ಮಾನಸಿಕವಾಗಿ ಕುಗ್ಗಿರುವ ಸ್ಥಿತಿಯಲ್ಲಿದ್ದೇನೆ. ಈ ಕುರಿತು ಕಮಿಷನರ್ ಸುಧೀರ್ ರೆಡ್ಡಿ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ ಕರೆ ಸ್ವೀಕರಿಸಿಲ್ಲ ಎಂದು ಅಡಿಯೋದಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net