ದ್ವಾರ ಸ್ಥಳಾಂತರ ಕಾಮಗಾರಿ ಶೀಘ್ರ ನಡೆಸಲು ಮನವಿ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರ ಸ್ಥಳಾಂತರ ಕಾಮಗಾರಿ ತುರ್ತಾಗಿ ನಡೆಸಬೇಕು.
ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ತುರ್ತಾಗಿ ನಡೆಸಲು ಭಕ್ತ ಸಮಿತಿ ದೇವಸ್ಥಾನ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರಿಗೆ ಮನವಿ ಸಲ್ಲಿಸಿದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಭಕ್ತ ವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ತುರ್ತಾಗಿ ನಡೆಸಲು ಭಕ್ತ ಸಮಿತಿ ದೇವಸ್ಥಾನ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರಿಗೆ ಮನವಿ ಸಲ್ಲಿಸಿದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಭಕ್ತ ವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Published on: 

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರ ಸ್ಥಳಾಂತರ ಕಾಮಗಾರಿ ತುರ್ತಾಗಿ ನಡೆಸಬೇಕು. ದೇವಸ್ಥಾನದಿಂದ ರಾ.ಹೆ. ಸಂಪರ್ಕಿಸುವ ರಸ್ತೆಯನ್ನು ದ್ವಿಮುಖ ಸಂಚಾರ ಮಾಡಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ಬಪ್ಪನಾಡು ಭಕ್ತ ವೃಂದದ ಸಮಿತಿ ವತಿಯಿಂದ ದೇವಸ್ಥಾನ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಬಪ್ಪನಾಡು ದೇವಸ್ಥಾನ ದಿನದಿಂದ ದಿನಕ್ಕೆ ಅಸಂಖ್ಯಾತ ಭಕ್ತರನ್ನು ಆಕರ್ಷಿಸುತ್ತಿದ್ದು, ಈ ಹಿಂದೆ ಪ್ರವಾಸಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದವು. ದೇವಸ್ಥಾನದ ಎದುರು ಭಾಗ ದ್ವಾರ ಸ್ಥಳಾಂತರ ಕಾಮಗಾರಿ ನಿಧಾನ ಗತಿಯಿಂದ ದೇವಸ್ಥಾನಕ್ಕೆ ಬರುವ ರಸ್ತೆ ಅಗಲ ಕಿರಿದಾಗಿದ್ದು, ದ್ವಿಮುಖ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರ ವಾಹನ ನೇರವಾಗಿ ಹೆದ್ದಾರಿಯಲ್ಲಿ ನಿಲ್ಲಿಸಲಾಗದ ಕಾರಣ ಮುಂದೆ ಹೋಗುವುದರಿಂದ ದೇವಸ್ಥಾನದ ಉತ್ಪತ್ತಿಗೂ ತೊಂದರೆಯಾಗಿದೆ.

ಮುಂದಿನ ತಿಂಗಳು ನವರಾತ್ರಿ ಮಹೋತ್ಸವ ಪ್ರಾರಂಭವಾಗುತ್ತಿದೆ. ಈ ಸಂದರ್ಭ ಕಾಮಗಾರಿಯಿಂದ ಭಕ್ತರಿಗೆ ಆಗುವ ತೊಂದರೆ ಮನಗಂಡು ದ್ವಾರ ಸ್ಥಳಾಂತರ ಕಾಮಗಾರಿ ತುರ್ತಾಗಿ ನಡೆಸುವುದು. ರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ಪರಿವರ್ತಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಪ್ಪನಾಡು ಭಕ್ತ ವೃಂದದ ವತಿಯಿಂದ ಮನವಿ ಸಲ್ಲಿಸಲಾಯಿತು.

ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಭಕ್ತ ವೃಂದದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮನವಿ ಪ್ರತಿಯನ್ನು ದ.ಕ. ಜಿಲ್ಲಾಧಿಕಾರಿ, ಮೂಲ್ಕಿ ತಾಲೂಕು ತಹಸೀಲ್ದಾರ್, ನಪಂ, ಮೂಲ್ಕಿ ಪೊಲೀಸ್ ಠಾಣೆಗೆ ನೀಡಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದು, ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net