ಧರ್ಮ ರಕ್ಷಣೆಯಿಂದ ನಮ್ಮ ಉಳಿವು

 ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪ್ರವೀಣ್ ಸರಳಾಯ ಮಾತನಾಡಿದರು. ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಪ್ರಮುಖರಾದ ರಾಜೇಶ್ ನಾಕ್ ಉಳಿಪಾಡಿಗುತ್ತು, ಕೆ.ರವೀಂದ್ರ ಕಂಬಳಿ, ಎಸ್.ಶ್ರೀಕಾಂತ್ ಶೆಟ್ಟಿ, ಜಯಪ್ರಕಾಶ್ ಪೆರ್ವ, ದಾಮೋದರ ಬಿ.ಎಂ. ಮೊದಲಾದವರು ಉಪಸ್ಥಿತರಿದ್ದರು.
ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪ್ರವೀಣ್ ಸರಳಾಯ ಮಾತನಾಡಿದರು. ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಪ್ರಮುಖರಾದ ರಾಜೇಶ್ ನಾಕ್ ಉಳಿಪಾಡಿಗುತ್ತು, ಕೆ.ರವೀಂದ್ರ ಕಂಬಳಿ, ಎಸ್.ಶ್ರೀಕಾಂತ್ ಶೆಟ್ಟಿ, ಜಯಪ್ರಕಾಶ್ ಪೆರ್ವ, ದಾಮೋದರ ಬಿ.ಎಂ. ಮೊದಲಾದವರು ಉಪಸ್ಥಿತರಿದ್ದರು.
Published on
 ಬಂಟ್ವಾಳ: ನಮ್ಮ ಧರ್ಮದ ಬಗ್ಗೆ ಅಭಿಮಾನವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಧರ್ಮದ ರಕ್ಷಣೆಯನ್ನು ಮಾಡುವವರನ್ನು ಧರ್ಮ ಕಾಪಾಡುತ್ತದೆ ಎಂದು ಸಜೀಪ ಮಾಗಣೆಯ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಹೇಳಿದರು.
 ಸಜೀಪ ಮಂಡಲದ ಸಜೀಪ ಮೂಡ ಹಾಗೂ ಸಜೀಪ ಮುನ್ನೂರು ಗ್ರಾಮದ ಹಿಂದೂ ಸಂಗಮ ಆಯೋಜನಾ ಸಮಿತಿ ಆಶ್ರಯದಲ್ಲಿ ಸಜೀಪಮೂಡ ಗ್ರಾಮದ ಬೇಂಕ್ಯದಲ್ಲಿ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಗೋಪೂಜೆ ನೆರವೇರಿಸಿ ಮಾತನಾಡಿದರು.
 ಪ್ರಾಂತ ಗೋಸೇವಾ ಪ್ರಮುಖ್ ಪ್ರವೀಣ್ ಸರಳಾಯ ದಿಕ್ಸೂಚಿ ಭಾಷಣ ಮಾಡಿದರು. ಕುಟುಂಬದಲ್ಲಿ ಮಹಿಳೆಯರ ಪಾತ್ರ ಎಂಬ ವಿಚಾರವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾನಿರತೆ ಬೇಬಿ ತಿಳಿಸಿಕೊಟ್ಟರು. ಶಿವರಂಜಿನಿ ಕಲಾತಂಡ ಬೊಕ್ಕಸ ಅವರಿಂದ ಭಾವಗೀತೆ ಹಾಗೂ ಭರತನಾಟ್ಯ ಕಾರ್ಯಕ್ರಮ ನಡೆಯಿತು.
 ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಪ್ರಮುಖರಾದ ಕೆ.ರವೀಂದ್ರ ಕಂಬಳಿ, ಎಸ್.ಶ್ರೀಕಾಂತ್ ಶೆಟ್ಟಿ, ಜಯಪ್ರಕಾಶ್ ಪೆರ್ವ, ದಾಮೋದರ ಬಿ.ಎಂ. ಮೊದಲಾದವರು ಉಪಸ್ಥಿತರಿದ್ದರು. ಅರುಣ್ ಕುಮಾರ್ ಕೆ. ಸ್ವಾಗತಿಸಿದರು. ಹರೀಶ್ ಕೊಳಕೆ ವಂದಿಸಿದರು. ನಿತೇಶ್ ಕಂದೂರು ಕಾರ್ಯಕ್ರಮ ನಿರೂಪಿಸಿದರು. ಸಜಿಪಮುನ್ನೂರು ಯುವಕ ಸಂಘದಿಂದ ಬೇಂಕ್ಯ ತನಕ ಶೋಭಾಯಾತ್ರೆ ನಡೆಯಿತು.

ಸಾವಿರಾರು ವರ್ಷಗಳ ಇತಿಹಾಸ ಇರುವ ಹಿಂದೂ ಸಮಾಜ, ಹಿಂದೂ ಸಂಸ್ಕೃತಿ, ಹಿಂದೂ ಧರ್ಮ ಅನೇಕ ಸಂಘರ್ಷಗಳ ನಂತರ ಅವಿನಾಶಿಯಾಗಿ ಎದ್ದು ನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net