ಪಿವಿಎಸ್ ಸಂಸ್ಥೆಯ ಆಡಳಿತದಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ

ಪಿವಿಎಸ್ ಸಂಸ್ಥೆಯ ಆಡಳಿತವನ್ನು ನಾನು ಸ್ವತಂತ್ರವಾಗಿ ನೋಡಿಕೊಳ್ಳುತ್ತಿದ್ದು, ಇದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ ಎಂದು ಪಿವಿಎಸ್ ಗ್ರೂಪ್‌ನ ಅಧ್ಯಕ್ಷೆ ಹಾಗೂ ಆಡಳಿತ ನಿರ್ದೇಶಕರಾದ ಸರೋಜಿನಿ ಎಂ. ಕುಶೆ ಗುರುವಾರ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಪಿವಿಎಸ್ ಸಂಸ್ಥೆಯ ಆಡಳಿತವನ್ನು ನಾನು ಸ್ವತಂತ್ರವಾಗಿ ನೋಡಿಕೊಳ್ಳುತ್ತಿದ್ದು, ಇದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ ಎಂದು ಪಿವಿಎಸ್ ಗ್ರೂಪ್‌ನ ಅಧ್ಯಕ್ಷೆ ಹಾಗೂ ಆಡಳಿತ ನಿರ್ದೇಶಕರಾದ ಸರೋಜಿನಿ ಎಂ. ಕುಶೆ ಗುರುವಾರ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
Published on
 ಮಂಗಳೂರು: ಪಿವಿಎಸ್ ಸಂಸ್ಥೆಯ ಆಡಳಿತವನ್ನು ನಾನು ಸ್ವತಂತ್ರವಾಗಿ ನೋಡಿಕೊಳ್ಳುತ್ತಿದ್ದು, ಇದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ ಎಂದು ಪಿವಿಎಸ್ ಗ್ರೂಪ್‌ನ ಅಧ್ಯಕ್ಷೆ ಹಾಗೂ ಆಡಳಿತ ನಿರ್ದೇಶಕರಾದ ಸರೋಜಿನಿ ಎಂ. ಕುಶೆ ಹೇಳಿದ್ದಾರೆ.
 ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಜತೆಯಲ್ಲಿದ್ದು, ಲೆಕ್ಕಪತ್ರ ನೋಡಿಕೊಳ್ಳುತ್ತಿದ್ದ ಕೆಲ ವ್ಯಕ್ತಿಗಳು ನಮ್ಮ ಸಂಸ್ಥೆ ಹಾಗೂ ಆಸ್ತಿ ಪಾಸ್ತಿ ಕಬಳಿಸುವ ದುರುದ್ದೇಶದಿಂದ ಕೃಷ್ಣದತ್ತ ಎಂಬ ವ್ಯಕ್ತಿಯಿಂದ ನಮಗೆ ತೊಂದರೆ ಉಂಟು ಮಾಡಲಾಗುತ್ತಿದೆ. ನಾನು ನ್ಯಾಯಾಲಯದ ಮೊರೆ ಹೋಗಿ ಕೃಷ್ಣದತ್ತ ನನ್ನ ಮಗನಲ್ಲ ಎಂಬ ತಡೆಯಾಜ್ಞೆ ತರಲಾಗಿದೆ. ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಕೃಷ್ಣದತ್ತ ಹಾಗೂ ಆತನ ಸಹಚರರ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ನನ್ನ ನ್ಯಾಯಯುತ ಹೋರಾಟದಲ್ಲಿ ಸಹಕಾರ ನೀಡಬೇಕೆಂದು ಕೋರಿದರು.
 ನನ್ನ ಅಜ್ಜ ದಿ. ಪುತ್ತು ವೈಕುಂಠ ಶೇಟ್ ರವರ ಪತ್ನಿಯ ತಂಗಿ ಮಗಳಾದ ವಸಂತಿ ಎಚ್.ರವರು ಅವರ ಬಾಲ್ಯದಿಂದ ನಮ್ಮ ಜತೆಯಲ್ಲಿದ್ದು, ನನ್ನ ಪತಿಯು ಮೃತಪಟ್ಟ ನಂತರ ನನ್ನ ಹೆಗಲಿಗ ಹೆಗಲು ನೀಡಿ ಪಿವಿಎಸ್ ಕಂಪನಿಗಳನ್ನು ನಾವಿಬ್ಬರೂ ಜತೆಗೂಡಿ ಮುನ್ನೆಡೆಸುತ್ತಾ ಬರುತ್ತಿದ್ದೇವೆ ಎಂದರು.
 ವೈಶ್ಯ ಎಜುಕೇಶನ್ ಸೊಸೈಟಿಯ ಸಂಸೋಷ್ ಚಂದ್ರ, ಅರ್ಚಕರಾದ ಜಯರಾಂ ಭಟ್, ಅಶೋಕ್ ಭಟ್, ಗೋಪಿ ಶೇಟ್, ಪ್ರವೀಣ್ ನಾಗ್ವೇಕರ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net