ಕೃತಕ ಬುದ್ಧಿಮತ್ತೆ ಕುರಿತು ಎನ್‌ಐಟಿಕೆ- ERNET ಇಂಡಿಯಾ ಜಂಟಿ ಸಭೆ

ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (NITK) ಸುರತ್ಕಲ್, ಎಜುಕೇಶನ್ ಅಂಡ್ ರಿಸರ್ಚ್ ನೆಟ್‌ವರ್ಕ್ ಆಫ್ ಇಂಡಿಯಾ (ERNET India) ಇವರ ಸಹಯೋಗದಲ್ಲಿ ಸ್ಮಾರ್ಟ್ ಮತ್ತು ಸತತ ಕೃಷಿಗಾಗಿ ಕೃತಕ ಬುದ್ಧಿಮತ್ತೆ (AI) ಕುರಿತು ರೌಂಡ್ ಟೇಬಲ್ ಸಭೆಯನ್ನು ಆಯೋಜಿಸಿತು.
ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (NITK) ಸುರತ್ಕಲ್, ಎಜುಕೇಶನ್ ಅಂಡ್ ರಿಸರ್ಚ್ ನೆಟ್‌ವರ್ಕ್ ಆಫ್ ಇಂಡಿಯಾ (ERNET India) ಇವರ ಸಹಯೋಗದಲ್ಲಿ ಸ್ಮಾರ್ಟ್ ಮತ್ತು ಸತತ ಕೃಷಿಗಾಗಿ ಕೃತಕ ಬುದ್ಧಿಮತ್ತೆ (AI) ಕುರಿತು ರೌಂಡ್ ಟೇಬಲ್ ಸಭೆಯನ್ನು ಆಯೋಜಿಸಿತು.
Published on
ಮಂಗಳೂರು: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (NITK) ಸುರತ್ಕಲ್, ಎಜುಕೇಶನ್ ಅಂಡ್ ರಿಸರ್ಚ್ ನೆಟ್‌ವರ್ಕ್ ಆಫ್ ಇಂಡಿಯಾ (ERNET India) — ಇದು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY)ದ ಅಧೀನದಲ್ಲಿರುವ ಸ್ವಾಯತ್ತ ವೈಜ್ಞಾನಿಕ ಸಂಸ್ಥೆ — ಇವರ ಸಹಯೋಗದಲ್ಲಿ ಸ್ಮಾರ್ಟ್ ಮತ್ತು ಸತತ ಕೃಷಿಗಾಗಿ ಕೃತಕ ಬುದ್ಧಿಮತ್ತೆ (AI) ಕುರಿತು ರೌಂಡ್ ಟೇಬಲ್ ಸಭೆಯನ್ನು ಆಯೋಜಿಸಿತು. ಈ ಸಭೆ ಇಂಡಿಯಾ–AI ಇಂಪ್ಯಾಕ್ಟ್ ಸಮಿಟ್ 2026ರ ಪೂರ್ವ-ಸಮಿಟ್ ಕಾರ್ಯಕ್ರಮವಾಗಿ ನಡೆಯಿತು.
ಇದರಲ್ಲಿ ERNET India; ICAR–National Research Centre on Pomegranate; ICAR–Central Plantation Crops Research Institute (CPCRI), ರೀಜನಲ್ ಸ್ಟೇಷನ್, ವಿತ್ತಲ್; University of Agricultural Sciences, ಧಾರವಾಡ; ICAR–Indian Institute of Spices Research, ICAR–Directorate of Cashew Research, Casper AgriScience, ಬೆಂಗಳೂರು; ಮತ್ತು IIIT ಧಾರವಾಡದ ತಜ್ಞರು ಭಾಗವಹಿಸಿದರು.
ಎನ್‌ಐಟಿಕೆ ಸುರತ್ಕಲ್ ನಿರ್ದೇಶಕ ಪ್ರೊ. ಬಿ. ರವಿ, ಆರ್ಥಿಕ ಸಲಹೆಗಾರ ಪ್ರೀತಿ ನಾಥ್, ಡೀನ್ ಪ್ರೊ. ಕೆ. ಉದಯ ಭಟ್, ಪ್ರಮುಖರಾದ ಡಾ. ಜೆನಿ ರಾಜನ್ ಮತ್ತು ಡಾ. ಸೌರವ್ ಕಾಂತಿ ಅಡ್ಡ್ಯ ಹಾಗೂ ಡಾ. ಪವೆನ್ಥನ್ ಮತ್ತಿತತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net