ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿಗೆ ಆಯ್ಕೆ

2026 ನೆ ಸಾಲಿನ ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿಗೆ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ.
2026 ನೆ ಸಾಲಿನ ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿಗೆ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ.
Published on
ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಮತ್ತು ಮಲಬಾರ್ ಗೋಲ್ಡ್ ಮಂಗಳೂರು ಶಾಖೆಯ ಜಂಟಿ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ನಡೆಯುವ ಕಾರ್ಯಕ್ರಮ ಇದೇ ಮಾ.27 ಕ್ಕೆ ಸಂಜೆ 5 ಗಂಟೆಗೆ ಮಂಗಳೂರಿನ ಮಲಬಾರ್ ಗೋಲ್ಡ್ ಮಳಿಗೆಯಲ್ಲಿ ಜರಗಲಿದೆ. 2026 ನೆ ಸಾಲಿನ ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿಗೆ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಭರತನಾಟ್ಯ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಗುರು ವಿದುಷಿ ಸುಮಂಗಲಾ ರತ್ನಾಕರ ರಾವ್ ಅವರನ್ನು ಕಲಾಕ್ಷೇತ್ರದಲ್ಲಿ ವಿಶ್ವರಂಗಭೂಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ರೋಟರಿ ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮತ್ತು ಕಲಾ ಪೋಷಕರಾಗಿರುವ ಉದ್ಯಮಿ ಸತೀಶ್ ಬೋಳಾರ್ ಇವರನ್ನು ಕಲಾಸೇವೆ ಕ್ಷೇತ್ರದಲ್ಲಿ ಮತ್ತು ರಂಗಸಂಘಟಕ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕರುಣಾಕರ ಶೆಟ್ಟಿಯವರನ್ನು ಸಂಘಟನಾ ಕ್ಷೇತ್ರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಸಂಚಾಲಕರಾದ ಶಶಿರಾಜ್ ರಾವ್ ಕಾವೂರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net