ಫೆ.1, 2 ರಂದು ‘ಮಹಿಳಾ ವೈಭವ-2026’

ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ, ಸಾಂಸ್ಕೃತಿಕ ಸಮ್ಮೇಳನ, ‘ಮಹಿಳಾ ವೈಭವ-2026’ ಕಾರ್ಯಕ್ರಮದ ಬಗ್ಗೆ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ  ಅಧ್ಯಕ್ಷರಾದ ಚಂಚಲಾ ತೇಜೋಮಯ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ, ಸಾಂಸ್ಕೃತಿಕ ಸಮ್ಮೇಳನ, ‘ಮಹಿಳಾ ವೈಭವ-2026’ ಕಾರ್ಯಕ್ರಮದ ಬಗ್ಗೆ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರಾದ ಚಂಚಲಾ ತೇಜೋಮಯ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Published on
ಮಂಗಳೂರು: ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ feb.1 ಹಾಗೂ 2ರಂದು ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನದ ಮಹಿಳಾ ವೈಭವ-2026 ಮಂಗಳೂರು ವಿವಿ ಕಾಲೇಜು ಮೈದಾನ ಹಾಗೂ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರಾದ ಚಂಚಲಾ ತೇಜೋಮಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದ 31 ಜಿಲ್ಲೆಗಳ ಮಹಿಳೆಯರನ್ನು ಒಗ್ಗೂಡಿಸಿಕೊಂಡು feb.1ರಂದು ಬೆಳಗ್ಗೆ 8.30ಕ್ಕೆ ಬಲ್ಮಠದ ವಿವಿ ಕಾಲೇಜು ಆವರಣದಲ್ಲಿ ನಾನಾ ವೇಷಭೂಷಣಗಳನ್ನು ಧರಿಸಿದ ಮಹಿಳೆಯರ ಜಾಥಾ ನಡೆಯಲಿದೆ. ಈ ಬಳಿಕ ಜಾನಪದ ಕ್ರೀಡೋತ್ಸವ ಅಂಗವಾಗಿ ಮಹಿಳೆಯರ ಹಗ್ಗ ಜಗ್ಗಾಟ ನಡೆಯಲಿದೆ. ಈ ಬಳಿಕ ಪುರಭವನದಲ್ಲಿ ಸಾಂಸ್ಕೃತಿಕ ಸಮ್ಮೇಳನದ ಅಂಗವಾಗಿ ವಿಚಾರಗೋಷ್ಠಿ, ಸಾಂಸ್ಕೃತಿಕ ಸ್ಪರ್ಧೆ, ಮಹಿಳೆಯರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಆಹಾರ ಮೇಳ, ಮಹಿಳೆಯರ ಆರೋಗ್ಯ ತಪಾಸಣೆ ಮತ್ತು ಅಂಗಾಂಗ ದಾನದ ನೋಂದಣಿ ಮುಂತಾದ ಹತ್ತಾರು ಕಾರ್ಯಕ್ರಮಗಳು ಸಾಗಲಿದೆ. ಈ ಕಾರ‌್ಯಕ್ರಮದಲ್ಲಿ ನಾನಾ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಾಧಕರಿಗೆ ಪ್ರಶಸ್ತಿ

ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 1 ಲಕ್ಷ ರೂ, 75 ಸಾವಿರ ರೂ ಹಾಗೂ 50 ಸಾವಿರ ರೂ. ನಗದು ಭಾಗವಹಿಸಿದ ಎಲ್ಲ ತಂಡಗಳಿಗೆ 10 ಸಾವಿರ ರೂ. ನಗದು ನೀಡಲಾಗುತ್ತದೆ. ಸಮಾಜಕ್ಕೆ ಅಮೋಘ ಕೊಡುಗೆ ನೀಡಿದ ಸಾಧಕರಿಗೆ ಗುರುತಿಸಿ ಐದು ಮಂದಿ ಸಾಧಕರಿಗೆ ಕರ್ನಾಟಕ ರಾಜ್ಯ ಮಹಿಳಾ ರತ್ನ ಹಾಹೂ ಸಮಾಜ ಸೇವಾರತ್ನ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಲಕಗಳನ್ನುಹೊಂದಿರುತ್ತದೆ. ಇದೇ ಯುವ ಸಾಹಿತಿಗಳನ್ನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 35 ವರ್ಷದೊಳಗಿನ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಲೇಖನ ಸ್ಪರ್ಧೆ, ನಗದು ಬಹುಮಾನ ನೀಡಲಾಗುತ್ತದೆ ಎಂದರು.
ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮನೋರಮಾ ಉಮೇಶನ್, ಸುಖಲಾಕ್ಷಿ ವೈ ಸುವರ್ಣ, ವಿಜಯಲಕ್ಷ್ಮಿ ಶೆಟ್ಟಿ, ರೇಖಾ ಶೆಟ್ಟಿ, ಭಾರತಿ ಎಂ ಹಾಗೂ ಅನುರಾಧ ರಾಜೀವ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net