ಸಸ್ಯೋತ್ಸವ, ಆಹಾರ ಮೇಳಕ್ಕೆ ಇರಲಿ ಪ್ರೋತ್ಸಾಹ

ಸುರತ್ಕಲ್‌ನ ರೈತ ಕುಡ್ಲ ಪ್ರತಿಷ್ಠಾನ ನೇತೃತ್ವ
 ಸುರತ್ಕಲ್ ಬಂಟರ ಭವನದಲ್ಲಿ ಶುಕ್ರವಾರ ಸಸ್ಯೋತ್ಸವ, ಆಹಾರ ಮೇಳ ಹಾಗೂ ಹೋಳಿಗೆ ಹಬ್ಬ ಉದ್ಘಾಟನೆಗೊಂಡಿತು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ರಮೇಶ್ ಶೆಟ್ಟಿ, ಅಶೋಕ್ ಶೆಟ್ಟಿ ತಡಂಬೈಲ್ ಮೊದಲಾದವರಿದ್ದರು.
ಸುರತ್ಕಲ್ ಬಂಟರ ಭವನದಲ್ಲಿ ಶುಕ್ರವಾರ ಸಸ್ಯೋತ್ಸವ, ಆಹಾರ ಮೇಳ ಹಾಗೂ ಹೋಳಿಗೆ ಹಬ್ಬ ಉದ್ಘಾಟನೆಗೊಂಡಿತು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ರಮೇಶ್ ಶೆಟ್ಟಿ, ಅಶೋಕ್ ಶೆಟ್ಟಿ ತಡಂಬೈಲ್ ಮೊದಲಾದವರಿದ್ದರು.
Published on: 

ಗುರುಪುರ: ಪ್ರಪ್ರಥಮ ಬಾರಿಗೆ ನಡೆಯುವ ಸಸ್ಯೋತ್ಸವ, ಆಹಾರ ಮೇಳಕ್ಕೆ ಜನತೆಯ ಪ್ರೋತ್ಸಾಹ ಹೆಚ್ಚು ಬೇಕು ಎಂದು ಸುಭಾಷಿತನಗರ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಶೆಟ್ಟಿ ಹೇಳಿದರು.

ಸುರತ್ಕಲ್ ಬಂಟರ ಭವನದಲ್ಲಿ ಶುಕ್ರವಾರ ಸುರತ್ಕಲ್‌ನ ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಬಂಟರ ಸಂಘ ಮತ್ತು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಸಸ್ಯೋತ್ಸವ, ಆಹಾರ ಮೇಳ ಹಾಗೂ ಹೋಳಿಗೆ ಹಬ್ಬ ಉದ್ಘಾಟಿಸಿ ಮಾತನಾಡಿದರು.

ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತ ಕುಡ್ಲ ಪ್ರತಿಷ್ಠಾನ, ಬಂಟರ ಸಂಘ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜನೆ ಮಾಡಿರುವ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇಲ್ಲಿ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಬಟ್ಟೆಬರೆ, ಹೂವು ತರಕಾರಿ ಸಸ್ಯಗಳು, ತಿಂಡಿ ತಿನಿಸು, ನಾನಾ ಬಗೆಯ ಆಹಾರ ಖಾದ್ಯಗಳು ಸಿಗುತ್ತಿದೆ. ಎಲ್ಲರೂ ಆಗಮಿಸುವ ಮೂಲಕ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಮಾತನಾಡಿ, ರೈತ ಕುಡ್ಲ ಪ್ರತಿಷ್ಠಾನ ಒಂದು ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಕಾರ ಬೇಕಿದೆ ಎಂದರು.

ಸುರತ್ಕಲ್ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಜಯೇಶ್ ಗೋವಿಂದ್, ಸುರತ್ಕಲ್ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಮಹಿಳಾ ವೇದಿಕೆ ಅಧ್ಯಕ್ಷೆ ಸರೋಜಾ ಟಿ.ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆಪದ್ಭಾಂಧವ ಸಂಘಟನೆಯ ಉಮೇಶ್ ಇಡ್ಯಾ, ರೈತಕುಡ್ಲ ಪ್ರತಿಷ್ಠಾನದ ಲತೀಶ ಮಳಲಿ ಮತ್ತಿತರರು ಉಪಸ್ಥಿತರಿದ್ದರು.

ಬಂಟರ ಸಂಘದ ಕೃಷಿ ಸಮಿತಿ ಸಂಚಾಲಕ ಸುಧಾಕರ ಶೆಟ್ಟಿ ಖಂಡಿಗೆ ಅವರನ್ನು ಸನ್ಮಾನಿಸಲಾಯಿತು.

ರಾಜೇಶ್ವರಿ ಡಿ.ಶೆಟ್ಟಿ ನಿರೂಪಿಸಿದರು. ಲಯನ್ ರಾಜಯ್ಯ ವಂದಿಸಿದರು. ರೈತಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಸೊರಕೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net