ನವಿಮುಂಬೈನ ಸಿಬಿಡಿ ಬೆಳಾಪುರದಲ್ಲಿರುವ ಎಇಸಿಎಲ್ ಕಚೇರಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕೆಆರ್‌ಸಿಎಲ್‌ನ ಪ್ರಾಜೆಕ್ಟ್‌ವಿಭಾಗದ ಮುಖ್ಯ ಇಂಜಿನಿಯರ್ ಪುಷ್ಕರ್ ಶ್ರೀವತ್ಸವ ಹಾಗೂ ಎಇಸಿಎಲ್‌ನ ಅಸೋಸಿಯೇಟ್ ಉಪಾಧ್ಯಕ್ಷ ಮಧಿರ ಶ್ರೀರಾಮ್ ಸಹಿ ಹಾಕಿದರು. ಈ ಸಂದರ್ಭದಲ್ಲಿ ಕೆಆರ್‌ಸಿಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಒಪ್ಪಂದದಡಿ ಭಾರತ ಹಾಗೂ ವಿದೇಶಗಳಲ್ಲಿ ರೈಲು, ಮೆಟ್ರೋ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಸಂಯುಕ್ತವಾಗಿ ಕೈಗೊಳ್ಳಲು ಎರಡೂ ಸಂಸ್ಥೆಗಳು ತಮ್ಮ ತಾಂತ್ರಿಕ ಪರಿಣತಿಯನ್ನು ಹಂಚಿಕೊಳ್ಳಲಿವೆ. ಸಂಕೀರ್ಣ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವ ಕೆಆರ್‌ಸಿಎಲ್‌ಗೆ ಇದ್ದರೆ, ಬಹುಶಾಖಾ ತಾಂತ್ರಿಕ ಸಲಹಾ ಸೇವೆಗಳಲ್ಲಿ ಎಇಸಿಎಲ್‌ಗೆ ವಿಶಿಷ್ಟ ಸಾಮರ್ಥ್ಯವಿದೆ.