ಕುದ್ರೋಳಿಯಿಂದ ಕಂಕನಾಡಿ ಗರಡಿಗೆ ಉತ್ಸವ ಬಂಡಿಯ ಭವ್ಯ ಮೆರವಣಿ

ಶ್ರೀ ಬ್ರಹ್ಮರಿಗೆ ನೂತನ ಚಂದ್ರಮಂಡಲ ರಥ ಹಾಗೂ ಶ್ರೀ ಕೊಡಮಣಿತ್ತಾಯ ದೈವದ ಉತ್ಸವ ಬಂಡಿಯ ಭವ್ಯ ಮೆರವಣಿಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್. ಜೈರಾಜ್ ಸೋಮಸುಂದರ್ ಚಾಲನೆ ನೀಡಿದರು.
ಶ್ರೀ ಬ್ರಹ್ಮರಿಗೆ ನೂತನ ಚಂದ್ರಮಂಡಲ ರಥ ಹಾಗೂ ಶ್ರೀ ಕೊಡಮಣಿತ್ತಾಯ ದೈವದ ಉತ್ಸವ ಬಂಡಿಯ ಭವ್ಯ ಮೆರವಣಿಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್. ಜೈರಾಜ್ ಸೋಮಸುಂದರ್ ಚಾಲನೆ ನೀಡಿದರು.
Published on

ಮಂಗಳೂರು: ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ಸ್ವರ್ಣಲೇಪಿತ ಶ್ರೀ ಬ್ರಹ್ಮರ ಉತ್ಸವ ಮೂರ್ತಿ, ಶ್ರೀ ಬ್ರಹ್ಮರಿಗೆ ಚಂದ್ರಮಂಡಲ ರಥ ಹಾಗೂ ಕೊಡಮಣಿತ್ತಾಯ ದೈವಕ್ಕೆ ನಿರ್ಮಾಣಗೊಂಡ ಉತ್ಸವ ಬಂಡಿಯ ಭವ್ಯ ಮೆರವಣಿಗೆ ಬುಧವಾರ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ನೆರವೇರಿತು.

ಶ್ರೀ ಬ್ರಹ್ಮರಿಗೆ ನೂತನ ಚಂದ್ರಮಂಡಲ ರಥ ಹಾಗೂ ಶ್ರೀ ಕೊಡಮಣಿತ್ತಾಯ ದೈವದ ಉತ್ಸವ ಬಂಡಿಯ ಭವ್ಯ ಮೆರವಣಿಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್. ಜೈರಾಜ್ ಸೋಮಸುಂದರ್ ಚಾಲನೆ ನೀಡಿದರು.

ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್, ಕುದ್ರೋಳಿ ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕೋಶಾಧಿಕಾರಿ ಪದ್ಮರಾಜ್, ಬಿಲ್ಲವ ಮಹಾಮಂಡಲದ ಪ್ರದಾನ ಕಾರ್ಯದರ್ಶಿ ಜಯಾನಂದ ಪೂಜಾರಿ, ಗೆಜ್ಜೆಗಿರಿ ಕ್ಷೇತ್ರಾಡಳಿತ ಅಧ್ಯಕ್ಷ ರವಿ ಚಿಲಿಂಬಿ, ಸಾಸಕ ವೇದವ್ಯಾಸ ಕಾಮತ್, ಪ್ರಮುಖರಾದ ರಾಜೇಂದ್ರ ಚಿಲಿಂಬಿ, ಊರ್ಮಿಳಾ ರಮೇಶ್, ಸಡಾಯಿರಾಮ್, ಜಗದೀಪ್, ಮಮತಾ ಗಟ್ಟಿ, ಮೋಹನ್, ವಿಠಲ್, ದೇವರಾಜ್, ದಿನೇಶ್ ಅಂಚನ್, ಜಯಾನಂದ ಎನ್, ಜೆ. ಕಿಶೋರ್ ಕುಮಾರ್, ಎ.ವಾಮನ, ದಿವರಾಜ್, ಜಗದೀಪ್ ಡಿ.ಸುವರ್ಣ, ಜೆ. ವಿಜಯ, ಚಂದ್ರನಾಥ ಅತ್ತಾವರ, ಮನಪಾ ನಿಕಟಪೂರ್ವ ಸದಸ್ಯ ಸಂದೀಪ್ ಗರೋಡಿ, ಹೇಮಂತ್ ಗರೋಡಿ ಮತ್ತಿತತರಿದ್ದರು.

ಇಂದು ರಥ ಹಾಗೂ ಬಂಡಿ ಸಮರ್ಪಣೆ

ಶ್ರೀ ಬ್ರಹ್ಮ ದೇವರಿಗೆ ಚಂದ್ರಮಂಡಲ ರಥ ಹಾಗೂ ಕೊಡಮಣಿತ್ತಾಯ ದೈವಕ್ಕೆ ಬಂಡಿ ಬುಧವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ವಾಹನ ಜಾಥಾ ಹೊರಟು, ಪಂಪ್ ವೆಲ್ ವೃತ್ತ ಮೂಲಕ ಶ್ರೀ ಕ್ಷೇತ್ರಕ್ಕೆ ಭವ್ಯ ಮೆರವಣಿಗೆ ಮೂಲಕ ಆಗಮಿಸಿದೆ. ಜ.1ರಂದು ರಥ ಹಾಗೂ ಬಂಡಿಯ ಸಮರ್ಪಣೆ ಪ್ರಯುಕ್ತ ಬೆಳಗ್ಗೆ 8 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ನಡೆಯಲಿದೆ.

"

ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಭಿವೃದ್ದಿ ಕಾರ್ಯವನ್ನು ಸರ್ವರ ಸಹಕಾರದಿಂದ ನಡೆಸಿಕೊಂಡು ಬರಲಾಗಿದೆ. ಕೊಡಮಣಿತ್ತಾಯ ದೈವದ ಅಪ್ಪಣೆ ಪ್ರಕಾರ ಈ ಬಾರಿಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಬ್ರಹ್ಮ ದೇವರಿಗೆ ಚಂದ್ರಮಂಡಲ ರಥ ಹಾಗೂ ಕೊಡಮಣಿತ್ತಾಯ ದೈವಕ್ಕೆ ಬಂಡಿಯನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net