ದೇಶದ ಶ್ರೀಮಂತ ವೈದ್ಯ ಪರಂಪರೆ ರಕ್ಷಣೆ ಕರ್ತವ್ಯ

ಆಯಷ್ ಹಬ್ಬ 2026ನ್ನು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.
ಆಯಷ್ ಹಬ್ಬ 2026ನ್ನು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.
Published on
ಮಂಗಳೂರು : ಭಾರತದ ಶ್ರೀಮಂತ ವೈದ್ಯ ಪದ್ದತಿಗಳನ್ನು ರಕ್ಷಿಸಿ ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ನಮ್ಮೆಲ್ಲರದ್ದಾಗಿದೆ ಎಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧೀಶ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಆಯುಷ್ ಹಬ್ಬ ಸಮಿತಿ 2026 ವತಿಯಿಂದ ನಗರದ ಡಾ. ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಆಯೋಜನೆಗೊಂಡ ಎರಡು ದಿನಗಳ ಆಯುಷ್ ಹಬ್ಬ 2026ನ್ನು ಶನಿವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಋಷಿ ಮುನಿಗಳು ಜಗತ್ತಿನ ಜನರ ಆರೋಗ್ಯ ರಕ್ಷಣೆಗೆ ನೀಡಿದ ಬಹು ದೊಡ್ಡ ಕೊಡುಗೆ. ಪ್ರಾಚೀನ ವೈದ್ಯ ಪದ್ದತಿಗಳು ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಕಾಪಾಡುತ್ತದೆ ಎಂದವರು ಹೇಳಿದರು.
ಮಂಗಳೂರು ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ್ಹ ಅವರು ಮಾತನಾಡಿ, ಇಂದು ಆಯುರ್ವೇದ, ಯುನಾನಿ ಮೊದಲಾದವುಗಳನ್ನು ಒಳಗೊಂಡ ಪಾರಂಪರಿಕವಾದ ಸಮಗ್ರ ವೈದ್ಯಪದ್ದತಿ ಜಾಗತಿಕವಾಗಿ ವ್ಯಾಪಕವಾಗಿ ಬಳಕೆಯಲ್ಲಿದೆ. ಮಾನಸಿಕ, ದೈಹಿಕ ಆರೋಗ್ಯ, ನೆಮ್ಮದಿಗೆ ಆಯುಷ್ ಕಾರಣವಾಗಿದೆ ಎಂದರು.
ಎಸ್ ವೈ ಎಸ್ ದ.ಕ ಜಿಲ್ಲಾಧ್ಯಕ್ಷ ಮೌಲಾನಾ ಅಬ್ದುಲ್ ಝೀಝ್ ದಾರಿಮಿ ಮಾತನಾಡಿ, ಭಾರತ ಪ್ರಕೃತಿಯೊಂದಿಗೆ ಬದುಕಲು ಕಲಿಸುವ ಮಣ್ಣು. ಕರುನಾಡು, ತುಳುನಾಡು ಉಜ್ವಲ ಅವಕಾಶ ನೀಡಿದ ಪೃಥ್ವಿ. ಪ್ರಕೃತಿಯೊಂದಿಗೆ ಸೇರಿ ಬದುಕುವುದನ್ನು ನಮ್ಮ ಪಾರಂಪರಿಕ ಚಿಕಿತ್ಸಾ ಪದ್ದತಿ ಕಲಿಸಿಕೊಟ್ಟಿದೆ ಎಂದರು.
ಮಾಹೆ ವಿವಿಯ ಪ್ರೊ ಚಾನ್ಸಲರ್ ಪ್ರೊ.ಎಚ್.ಎಸ್. ಬಳ್ಳಾಲ್ ಮಾತನಾಡಿ, ಇಂದು ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಆಯುರ್ವೇದ ಸಹಾಯ ಮಾಡುತ್ತದೆ. ಆಯುರ್ವೇದದ ಬಗ್ಗೆ ಯುವ ಜನತೆಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.
ಮಂಗಳೂರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಆಯುಷ್ ಋಷಿ ಮುನಿಗಳಿಂದ ಜಗತ್ತಿಗೆ ಲಭಿಸಿದ ವೈದ್ಯ ಪದ್ದತಿ. ದೈಹಿಕ ಕಾಯಿಲೆಗಳಿಗೆ ಔಷಧಿಯಾಗುವ ಜತೆಗೆ ಒತ್ತಡ ನಿವಾರಣೆ ಯಂತಹ ಮಾನಸಿಕ ಸಮಸ್ಯೆಗೂ ಪರಿಹಾರ ಒದಗಿಸುತ್ತದೆ ಎಂದರು.
ಆಯುಷ್ ಹಬ್ಬ ಸಮಿತಿ- 2026ರ ಅಧ್ಯಕ್ಷ ಡಾ.ಕೇಶವ ಪಿ.ಕೆ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್, ಬೆಂಗಳೂರು ಎಸ್.ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್. ಆರ್. ನಾಗೇಂದ್ರ, ಶಾರದಾ ಸಮುಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಎಸ್ ಡಿ ಎಂ ಆಯುರ್ವೇದ ಮೆಡಿಕಲ್ ಕಾಲೇಜುಗಳ ನಿರ್ದೇಶಕ ಡಾ. ಪ್ರಸನ್ನ ನರಸಿಂಹ ರಾವ್, ಡಾ. ಖಾಲಿದ್, ಕೋಟೆಕಲ್ ವೈದ್ಯಕೀಯ ಸಂಸ್ಥೆಯ ಡಾ.ಮಧು ವಾರಿಯರ್, ಆಯುರ್ವೇದ ಯುನಾನಿ ವೈದ್ಯ ಮಂಡಳಿಯ ಮಾಜಿ ಅಧ್ಯಕ್ಷ ಡಾ.ಸತ್ಯಮೂರ್ತಿ ಭಟ್, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ಸಂಘಟನಾ ಕಾರ್ಯದರ್ಶಿ ಡಾ.ಸಚಿನ್ ನಡ್ಕ ಉಪಸ್ಥಿತರಿದ್ದರು. ಆಯುಷ್ ಹಬ್ಬ ಸಮಿತಿಯ ಗೌರವಾಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net