ದ.ಕ. ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ಆಯೋಜಿಸಲಾದ ಈ ಕುದುರೆಗಳ ಜೊತೆಗಿನ ಫ್ರೀಡಂ ರೈಡ್‌ನಲ್ಲಿ ಅಕ್ಷಮ್ಯ, ಮನೋಜ್, ಹುದಾ, ನಿಕೇಪ್, ವಿಹಾನ್, ನಿತ್ಯಾನಂದ ಸಿದ್ಧಿಯವರು ಭಾಗವಹಿಸಿದ್ದರು. ಅವಿನಾಶ್ ಅಚ್ಚನಹಳ್ಳಿ ನೇತೃತ್ವದಲ್ಲಿ ನಡೆದ ಈ ಅಶ್ವಾರೋಹಣ ಫ್ರೀಡಂ ರೈಡ್ ನಗರದ ಕದ್ರಿಯಿಂದ ಕೆಎಸ್‌ಆರ್‌ಟಿಸಿ, ಲಾಲ್‌ಬಾಗ್, ಸಿಟಿ ಸೆಂಟರ್, ಹಂಪನಕಟ್ಟೆಯ ಮೂಲಕ ನೆಹರೂ ಮೈದಾನದಲ್ಲಿ ಕೊನೆಗೊಂಡಿತು.