ಕರಾವಳಿ ಕ್ರೈಸ್ತರಿಂದ ಗುಡ್ ಫ್ರೈಡೇ ಆಚರಣೆ

 ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಪವಿತ್ರ ದಿನವನ್ನು ದಕ್ಷಿಣ ಕನ್ನಡ, ಉಡುಪಿ ಭಾಗದ ಕ್ರೈಸ್ತರು ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಶುಭ ಶುಕ್ರವಾರ(ಗುಡ್ ಫ್ರೈಡೇ)ವಾಗಿ ಆಚರಿಸಿದರು.
ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಪವಿತ್ರ ದಿನವನ್ನು ದಕ್ಷಿಣ ಕನ್ನಡ, ಉಡುಪಿ ಭಾಗದ ಕ್ರೈಸ್ತರು ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಶುಭ ಶುಕ್ರವಾರ(ಗುಡ್ ಫ್ರೈಡೇ)ವಾಗಿ ಆಚರಿಸಿದರು.
Published on
ಮಂಗಳೂರು: ಕೈಸ್ತಬಾಂದವರ ಪವಿತ್ರ ದಿನ ಗುಡ್ ಫ್ರೈಡೇ ಆಚರಣೆಯನ್ನು ಕರಾವಳಿಯಲ್ಲಿ ಕ್ರೈಸ್ತರಿಂದ ಸಂಬ್ರಮದಿಂದ ಆಚರಿಸಲಾಯಿತು. ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಪವಿತ್ರ ದಿನವನ್ನು ದಕ್ಷಿಣ ಕನ್ನಡ, ಉಡುಪಿ ಭಾಗದ ಕ್ರೈಸ್ತರು ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಶುಭ ಶುಕ್ರವಾರ(ಗುಡ್ ಫ್ರೈಡೇ)ವಾಗಿ ಆಚರಿಸಿದರು.
ಉಪವಾಸ ವ್ರತ ಕೈಗೊಂಡು, ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ, ಶಿಲುಬೆಯ ಹಾದಿ(ವೇ ಆ್ ದಿ ಕ್ರಾಸ್), ಧ್ಯಾನ, ಶಿಲುಬೆಯ ಆರಾಧನೆ ಮತ್ತಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಕ್ರಿಸ್ತರಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ಮರಣವನ್ನಪ್ಪಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ’ ಮೂಲಕ ಯೇಸುಕ್ರಿಸ್ತರು ಅನುಭವಿಸಿದ ಕಷ್ಟ, ಯಾತನೆಗಳನ್ನು ಧ್ಯಾನಿಸಿ ತಮ್ಮ ಬದುಕಿನಲ್ಲೂ ಕಷ್ಟಗಳನ್ನು ಎದುರಿಸುವ ಧೈರ್ಯ ಮತ್ತು ಶಕ್ತಿ ಒದಗಿಸುವಂತೆ ಪ್ರಾರ್ಥಿಸಿದರು. ಸಂಜೆ ಚರ್ಚ್‌ಗಳಲ್ಲಿ ನಡೆದ ಪ್ರಾರ್ಥನಾ ವಿಧಿಗಳಲ್ಲಿ ಬೈಬಲ್ ವಾಚನದ ವೇಳೆ ಧರ್ಮಗುರುಗಳು ರಕ್ತವರ್ಣದ ಬಟ್ಟೆ ಧರಿಸಿ ಯೇಸುಕ್ರಿಸ್ತರ ಕೊನೆಯ ಘಳಿಗೆಗಳ ಕಥನವನ್ನು ಓದಿ, ಪ್ರವಚನ ನೀಡಿದರು.
*ಮಕ್ಕಳಿಗೆ ವಿಶೇಷ ಪ್ರಾಧ್ಯಾನ್ಯತೆ
ಈ ವರ್ಷದ ಆಚರಣೆಯು ವಿಶೇಷವಾಗಿ ಮಕ್ಕಳ ವರ್ಷ ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿದ್ದು, ಚರ್ಚ್‌ಗಳ ವಿವಿಧ ವಿಧಿವಿಧಾನಗಳಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ.ಶ್ರಕ್ರವಾರ ಬೆಳಿಗ್ಗೆ ಧರ್ಮಪ್ರಾಂತ್ಯದ ಬಹುತೇಕ ಚರ್ಚ್‌ಗಳಲ್ಲಿ ನಡೆದ ಶಿಲುಬೆಯ ಹಾದಿಯ ಭಕ್ತಿ ಸೇವೆಯಲ್ಲಿ ಮಕ್ಕಳು ಮುಂಚೂಣಿಯಲ್ಲಿದ್ದರು. ಕ್ರಿಸ್ತರ ಕಷ್ಟಾನುಭವಗಳ ಹದಿನಾಲ್ಕು ಸ್ಥಳಗಳ ಸ್ಮರಣೆಯ ಸಂದರ್ಭದಲ್ಲಿ, ಮಕ್ಕಳೇ ಶಿಲುಬೆಯನ್ನು ಹೊತ್ತು ಸಾಗಿದ್ದು ನೆರೆದಿದ್ದ ಭಕ್ತಾದಿಗಳ ಗಮನ ಸೆಳೆಯಿತು. ಮಕ್ಕಳಿಗಾಗಿಯೇ ವಿಶೇಷ ಧ್ಯಾನ ಮತ್ತು ಪ್ರಾರ್ಥನೆಗಳನ್ನು ಹಮ್ಮಿಕೊಳ್ಳಲಾಗಿತ್ತು, ಇದು ಅವರಿಗೆ ಕ್ರಿಸ್ತನ ತ್ಯಾಗದ ಸಂದೇಶವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು.
ಪಂಜದ ಸಂತ ರೀಟಾ ಚರ್ಚ್‌ನಲ್ಲಿ ಬಿಷಪ್
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಪುತ್ತೂರು ವಲಯದ ಪಂಜದ ಸಂತ ರೀಟಾ ಚರ್ಚ್‌ನಲ್ಲಿ ನಡೆಯುವ ಶುಭ ಶುಕ್ರವಾರದ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸಲಿದ್ದಾರೆ. ಈ ಶೋಕದ ಆಚರಣೆಯು ನಾಳೆ ರಾತ್ರಿ ನಡೆಯಲಿರುವ ಪಾಸ್ಖಾ ಜಾಗರಣೆಯೊಂದಿಗೆ (ಈಸ್ಟರ್ ವಿಜಿಲ್) ಕೊನೆಗೊಂಡು, ಭಾನುವಾರ ಕ್ರಿಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್ ಅನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಯೇಸುವಿನ ಪುನರುತ್ಥಾನದ ಜಾಗರಣೆ ಶನಿವಾರ ನಡೆಯಲಿದ್ದು, ಸಂಜೆ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ನಡೆಯಲಿದೆ. ಯೇಸು ಮರಣದ ಬಳಿಕ ಪುನರುತ್ಥಾನಗೊಳ್ಳುತ್ತಾರೆ ಎಂಬ ನಂಬಿಕೆ ಆಧರಿಸಿ ಶನಿವಾರ ಜಾಗರಣೆ, ಭಾನುವಾರ ಈಸ್ಟರ್ ಆಚರಣೆ ನಡೆಯಲಿದೆ. ಮಂಗಳೂರು ಧರ್ಮಪ್ರಾಂತ್ಯ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನಾ ಜಾಗರಣೆಯ ಬಲಿಪೂಜೆಯನ್ನು ಶನಿವಾರ ಸಂಜೆ 7ಕ್ಕೆ ನಡೆಸಲಿದ್ದಾರೆ. ಈಸ್ಟರ್ ಹಬ್ಬದ ಭಾನುವಾರದ ಬಲಿಪೂಜೆಯನ್ನು ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆಸಲಿದ್ದಾರೆ.
------------------
ಕ್ರಿಸ್ತನ ಬಲಿದಾನ ನಮಗೆ ಸಹಾನುಭೂತಿ, ಸಹಬಾಳ್ವೆ ಮತ್ತು ವಾನವೀಯ ಮೌಲ್ಯಗಳೆಡೆಗೆ ಮನವನ್ನು ಹರಿಸಲಿ. ಪ್ರೀತಿ ಮತ್ತು ಕ್ಷಮೆಯ ಮೂಲಕ ನಿಜವಾದ ಶಾಂತಿಯನ್ನು ಪಡೆಯಬಹುದು. ಪ್ರಭು ಕ್ರಿಸ್ತರು ಶಿಲುಬೆಗೆ ಏರಿಸಲ್ಪಟ್ಟಾಗ ಅದು ಮನುಕುಲಕ್ಕಾಗಿ ವಾಡಿದ ಪ್ರೀತಿಯ ಉಡುಗೊರೆಯಾಯಿತು. ಪ್ರೀತಿಯ ಅಗಾಧತೆಯನ್ನು ತೋರಿಸುವ ಸರ್ವೋಚ್ಚ ತ್ಯಾಗದ ಸಂಕೇತವಾಯಿತು. ಪ್ರೀತಿ, ಕ್ಷಮೆ, ಪರೋಪಕಾರದ ಮೂಲಕ ನವ ಸವಾಜ ಕಟ್ಟೋಣ.
ಡಾ. ಪೀಟರ್ ಪೌಲ್ ಸಲ್ಡಾನ್ಹಾ,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net