ಸ್ವಾತಂತ್ರೃ ಸ್ವೇಚ್ಚೆಯಲ್ಲ!

ಮಜಲು ಕೊಂಚಾಡಿಯ ನಿಷ್ಕ ಬಡಾವಣೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಸ್ಕೃತದಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ಮಜಲು ಕೊಂಚಾಡಿಯ ನಿಷ್ಕ ಬಡಾವಣೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಸ್ಕೃತದಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
Published on

ನಾವು ಪರಕೀಯ ಆಡಳಿತದಿಂದ ಮುಕ್ತರಾಗಿ ಅನುಭವಿಸುತ್ತಿರುವ ಸ್ವಾತಂತ್ರ್ಯ ಕೇವಲ ಸ್ವೇಚ್ಚೆಯಲ್ಲ, ಶತಮಾನಗಳಿಂದ ವಿದೇಶೀ ಆಡಳಿತಕ್ಕೆ ಸಿಕ್ಕು ನಲುಗಿದ ಭಾರತೀಯರು ಸ್ವಾತಂತ್ರ್ಯೋ ತ್ತರ ಕಾಲದಲ್ಲಿ ತಮ್ಮ ಮೂಲಕ್ಕೆ ಮರಳುವ ಬಗ್ಗೆ ಚಿಂತಿಸಬೇಕು. ಪರಕೀಯ ಆಡಳಿತವಿದ್ದಾಗ ನಮ್ಮನ್ನು ಆಳಿದವರು ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿದ ಶಿಕ್ಷಣ ನೀತಿಯನ್ನೇ ಅದೇ ರೀತಿಯಲ್ಲಿ ನಾವು ಇನ್ನೂ ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ಸಂಸ್ಕೃತ ಭಾರತಿಯ ಅಖಿಲ ಭಾರತ ಮಟ್ಟದ ಜ್ಯೇಷ್ಠ ಕಾರ್ಯಕರ್ತ ಡಾ. ವಿಶ್ವಾಸ ಹೆಚ್ ಆರ್ ಹೇಳಿದರು.

ಮಜಲು ಕೊಂಚಾಡಿಯ ನಿಷ್ಕ ಬಡಾವಣೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಸಂಸ್ಕೃತದಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ನಿಜವಾದ ಭಾರತೀಯತೆ, ನೈಜ ಸಂಸ್ಕೃತಿ ಏನು ಎಂಬುದನ್ನು ಅರಿಯುವ ಪ್ರಯತ್ನ ಇನ್ನಾದರೂ ಮಾಡಬೇಕು. ಇದು ಸಂಸ್ಕೃತ ಅಧ್ಯಯನದಿಂದ ಮಾತ್ರ ಸಾಧ್ಯ. ಹೇಗೆಂದರೆ ಋಷಿ ಮುನಿಗಳು ತಮ್ಮ ಪ್ರಾಚೀನ ಜ್ಞಾನ ಸಂಪತ್ತ್ತೆಲ್ಲವನ್ನು ಸಂಸ್ಕೃತ ಭಾಷೆಯಲ್ಲಿ ನಿಕ್ಷೇಪಿಸಿದ್ದಾರೆ. ರಾಜತಾಂತ್ರಿಕ, ಆರೋಗ್ಯ, ಅಧ್ಯಾತ್ಮ, ವೈಜ್ಞಾನಿಕ ಇತ್ಯಾದಿ ಬೇರೆ ಬೇರೆ ವಿಚಾರಗಳ ಬಗ್ಗೆ ಅಪಾರ ಜ್ಞಾನ ಭಂಡಾರದ ಸಾಹಿತ್ಯ ನಮ್ಮ ಸಂಸ್ಕೃತ ಭಾಷೆಯಲ್ಲಿದೆ. ಆದರೆ ಅದನ್ನು ಬಳಸಿಕೊಳ್ಳಬೇಕಾದರೆ ಸಂಸ್ಕೃತ ಭಾಷೆ ಎಂಬ ಕೀಲಿ ಕೈ ನಮ್ಮದಾಗಬೇಕು. ಸಂಸ್ಕೃತವನ್ನು ಕಲಿಯಲು, ಬಳಸಲು ಎಲ್ಲರಿಗೂ ಸಾಧ್ಯವಿದೆ, ಸಾಕಷ್ಟು ಅವಕಾಶಗಳೂ ಇವೆ. ನಾವು ಇದನ್ನು ಅರಿಯಬೇಕು ಎಂದರು.
ಪ್ರಮುಖರಾದ ಡಾ. ಗೌತಮ್ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಾ. ವಾದೀಶ್ ಭಟ್ ಸ್ವಾಗತಿಸಿ ಡಾ. ಮೋಹನ್ ಭಟ್ ವಂದಿಸಿದರು. ಡಾ. ವಿದ್ಯಾ ಗೌತಮ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಶ್ರೀದೇವಿ ಜೋಶಿ ಪ್ರತಿಜ್ಞೆಯನ್ನು ಎಲ್ಲರಿಗೂ ಭೋದಿಸಿದರು. ಸಾಧ್ವಿ ನಿರೂಪಿಸಿದರು. ಶ್ರೇಯಸ್ ಜೋಶಿ, ಕುಮಾರ ಸಂವಿದ್ ಹಾಗು ಕುಮಾರಿ ಪ್ರತಿಭಾ ಪ್ರಾರ್ಥನೆಯನ್ನು ನೆರವೇರಿಸಿದರು., ,ಕಾರ್ಯದರ್ಶಿ ಶ್ಯಾಮಪ್ರಸಾದ ಉಪಸ್ಥಿತರಿದ್ದರು.
ನಿಷ್ಕ ಬಡಾವಣೆಯ ಮಕ್ಕಳು, ಸವಿತಾ ರವಿಶಂಕರ್ ಮತ್ತು ಡಾ. ಅನೂಷಾ ಅವರು ಸಂಸ್ಕೃತದಲ್ಲಿ ಕಿರು ರೂಪಕವನ್ನು ಪ್ರದರ್ಶಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net