ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಫಾದರ್ ಮುಲ್ಲರ್ ಸಂಸ್ಥೆಗಳ ಅಧ್ಯಕ್ಷ ಡಾ. ಪೀಟರ್ ವಾವ್ಲ್ ಸಲ್ಡಾನ್ಹಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಕಷ್ಟು ಸಂದರ್ಭಗಳಲ್ಲಿ ಹೋಮಿಯೋಪತಿ ವಿಧಾನ ಎರಡನೇ ಆಯ್ಕೆಯಾಗುತ್ತದೆ. ಆದರೆ, ಹೋಮಿಯೋಪತಿಯ ಆಳ, ಅಗಲವನ್ನು ವಿವರಿಸುವ ಕೆಲಸವಾಗಬೇಕು. ರೋಗಿಗಳು ಕೇಳುವ ಪ್ರಶ್ನೆಗಳನ್ನು ಕಡೆಗಣಿಸದೆ ಸಂಶೋಧನೆಗ ಮೆಟ್ಟಿಲಾಗಿ ಬಳಸಿಕೊಳ್ಳಬೇಕು. ರೋಗಿಗಳ ತಾಳ್ಮೆ ಪರೀಕ್ಷಿಸದೆ ಅವರಿಗೆ ಆರಾಮದಾಯಕ ಅನುಭವ ನೀಡಬೇಕು. ನಿರಂತರ ಕಲಿಕೆ, ಅಭ್ಯಾಸ, ಸಂಶೋಧನೆಯಿಂದ ಹೋಮಿಯೋಪಥಿ ವಿಧಾನದಲ್ಲಿ ಹೊಸತನ ಮೂಡಿಸಲು ಸಾಧ್ಯ ಎಂದರು.