ಆರಂಭದಲ್ಲಿ ಮಂಗಳೂರು ನಗರದ ಮಧ್ಯದ 3 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ನಂತರ ಇಡೀ ನಗರಕ್ಕೆ ವಿಸ್ತರಿಸುವ ಯೋಜನೆ ಇದು. ಮಂಗಳೂರು ಮಹಾನಗರ ಪಾಲಿಕೆಯು ಹೈದರಾಬಾದ್‌ನ ಎಕ್ಸ್‌ವೈಝೆಡ್ ಇನ್ನೊವೇಶನ್ ಟೆಕ್ನಾಲಜೀಸ್ ಸಂಸ್ಥೆ ಮೂಲಕ ಹಂಪನಕಟ್ಟೆ ಕ್ಲಾಕ್ ಟವರ್‌ನಿಂದ ಆರಂಭಿಸಿ, ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಬಂದರಿನ ಸ್ವಲ್ಪ ಭಾಗ, ಕಾರ್ ಸ್ಟ್ರೀಟ್ ಮೂಲಕ ಕೆನರಾ ಕಾಲೇಜು ತನಕದ ಸುಮಾರು 4.5 ಕಿ.ಮೀ. ವ್ಯಾಪ್ತಿಯಲ್ಲಿ ಆರಂಭಿಕ ಸರ್ವೆ ನಡೆಸಿದೆ. ಈ ಸಮೀಕ್ಷೆ ನಡೆಸಿದ ಪ್ರದೇಶದ ಒಳ್ಳೆಯ ಮತ್ತು ಕೆಟ್ಟ ರಸ್ತೆಗಳು, ಒಳಚರಂಡಿ, ರಸ್ತೆಗಳು, ಬೀದಿದೀಪ, ಫುಟ್‌ಪಾತ್, ಕಸದ ತೊಟ್ಟಿಗಳು, ಸರಕಾರಿ ಕಟ್ಟಡಗಳು, ನಿರ್ಮಾಣ ಹಂತದ ಕಟ್ಟಡಗಳು, ಪಾರ್ಕ್‌ಗಳು, ಆಟದ ಮೈದಾನ, ನೀರಿನ ಟ್ಯಾಂಕಿ, ರಸ್ತೆಯ ಬದಿಯ ಹೋಡಿರ್ಂಗ್‌ಗಳು ಸೇರಿದಂತೆ ಸಮಗ್ರ ಮಾಹಿತಿ ಸ್ಪಷ್ಟವಾಗಿ ವೀಕಿಕ್ಷಿಸಲು ಸಾಧ್ಯವಾಗಿದೆ.