ಶುಕ್ರವಾರ ಕರಾವಳಿಯಲ್ಲಿ ಸರಾಸರಿ 34.6ಡಿಗ್ರಿ ಗರಿಷ್ಠ, 23.4 ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಈಗಿನಂತೆ ಎಪ್ರಿಲ್ 26 ರಿಂದ ಸಾಮಾನ್ಯ ಮಳೆ ಆರಂಭವಾಗುವ ಸಾಧ್ಯತೆಗಳಿದ್ದು, 28ರಿಂದ ಜೋರಾಗುವ ಲಕ್ಷಣಗಳಿವೆ. ಅರಬ್ಬಿ ಸಮುದ್ರ ಕಡೆಯಿಂದ ಮೋಡಗಳು ಕಾಣಿಸಿಕೊಂಡಿರುವುದರಿಂದ ಕರಾವಳಿ ಭಾಗಗಳಲ್ಲಿ ಮುಂದಿನ 1 ವಾರದೊಳಗೆ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳೂರಿನಲ್ಲಿ 35.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮಧ್ಯಾಹ್ನ 2 ಗಂಟೆಗೆ ದಾಖಲಾಗಿತ್ತು. 23.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಕಳೆದ 2 ದಿನಗಳಿಂದ ರಾತ್ರಿ 21.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಠಾಂಶ ದಾಖಲಾಗಿರುವುದರಿಂದ ರಾತ್ರಿ ಒಣ ಚಳಿ ಮುಂದುವರಿದಿದೆ. ಐಎಂಡಿ ಪ್ರಕಾರ ಈ ವಾರದಲ್ಲಿ ಒಂದೆರಡು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರುವ ಸಾಧ್ಯತೆ ಇನ್ನಷ್ಟು ಇದೆ. ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ನೀಡಿದ ಮಾಹಿತಿಯನ್ವಯ ಶನಿವಾರವೂ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶದಲ್ಲಿ ಏರಿಕೆಯಾಗಲಿದೆ.