ಕಾಸರಗೋಡಿನಲ್ಲಿ ಬ್ಲ್ಯಾಕ್ ಬ್ರೆಸ್ಟೆಡ್ ವೀವರ್ ಪಕ್ಷಿ ಪತ್ತೆ

ವಿಶಿಷ್ಟ ಗೂಡು ಕಟ್ಟುವ ಕೌಶಲಕ್ಕೆ ಹೆಸರುವಾಸಿ
ಕಾಸರಗೋಡಿನಲ್ಲಿ ಪತ್ತೆಯಾದ ಬ್ಲ್ಯಾಕ್ ಬ್ರೆಸ್ಟೆಡ್ ವೀವರ್ ಪಕ್ಷಿ.
ಕಾಸರಗೋಡಿನಲ್ಲಿ ಪತ್ತೆಯಾದ ಬ್ಲ್ಯಾಕ್ ಬ್ರೆಸ್ಟೆಡ್ ವೀವರ್ ಪಕ್ಷಿ.
Published on: 

ಮುಳ್ಳೇರಿಯ: ತನ್ನ ಅಪೂರ್ವ ಗೂಡು ನಿರ್ವಾಣ ಕೌಶಲಕ್ಕೆ ಹೆಸರಾಗಿರುವ ಗೀಜಗ ಜಾತಿಗೆ ಸೇರಿದ ಬ್ಲ್ಯಾಕ್ ಬ್ರೆಸ್ಟೆಡ್ ವೀವರ್ ಪಕ್ಷಿ ಕಾಸರಗೋಡು ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಚೀಮೇನಿಯ ಅರಿಯಿಟ್ಟುಪಾರ ಪ್ರದೇಶದಲ್ಲಿ ರಾವಣೇಶ್ವರ ನಿವಾಸಿ ಹರೀಶ್ ಬಾಬು ಅವರು ಈ ಅಪರೂಪದ ಪಕ್ಷಿಯ ಛಾಯಾಚಿತ್ರ ಸೆರೆಹಿಡಿದಿದ್ದಾರೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಪಕ್ಷಿ ಪ್ರಭೇದಗಳ ಸಂಖ್ಯೆ 421ಕ್ಕೆ ಏರಿಕೆಯಾಗಿದೆ.

ಚೌಗು ಪ್ರದೇಶ ಹಾಗೂ ಜಲಮೂಲಗಳ ಸಮೀಪದ ಹುಲ್ಲುಗಾವಲುಗಳು ಈ ಪಕ್ಷಿಗಳ ಪ್ರಮುಖ ಆವಾಸಸ್ಥಾನಗಳಾಗಿವೆ. ಹುಲ್ಲು ಮತ್ತು ಸಸ್ಯದ ನಾರುಗಳನ್ನು ಬಳಸಿ ಮರಗಳಲ್ಲಿ ತೂಗಾಡುವ ಆಕಷರ್ಕ ಗೂಡುಗಳನ್ನು ನಿರ್ಮಿಸುವ ಈ ಪಕ್ಷಿಗಳು ತಮ್ಮ ವಿಶಿಷ್ಟ ಗೂಡು ಕಟ್ಟುವ ಕೌಶಲಕ್ಕೆ ಹೆಸರುವಾಸಿಯಾಗಿವೆ.