1963ರಲ್ಲಿ ಜನಿಸಿದ ಫಾ.ಮೆಲ್ವಿನ್ ಪಿಂಟೋ ಅವರು ತಮ್ಮ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವನ್ನು ಸೇಂಟ್ ಅಲೋಶಿಯಸ್ ಸಂಸ್ಥೆಯಲ್ಲಿ ಪೂರ್ಣಗೊಳಿಸಿ, 1981ರಲ್ಲಿ ಜೆಸ್ಯೂಟ್‌ಗೆ ಸೇರ್ಪಡೆಯಾಗಿದ್ದರು. 1997ರಲ್ಲಿ ಯಾಜಕ ಪದವಿ ಸ್ವೀಕರಿಸಿದ ಅವರು, ಹಾಸನದ ಸೆಂಟ್ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ಅವರು ಸೆಂಟ್ ಜೋಸೆಫ್ ಇಂಡಿಯನ್ ಪಿಯು ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ 2007ರವರೆಗೆ ಕಾರ್ಯನಿರ್ವಹಿಸಿದರು.