VIDEO| ಕಾರು ಡಿಕ್ಕಿಯ ರಭಸಕ್ಕೆ ಹಾರಿ ಬೈಕ್​ ಚಕ್ರದಡಿಗೆ ಬಿದ್ದ ಬಾಲಕ...!

Boy
Published on

ಮಂಗಳೂರು: ಹಾಲು ತರಲು ಹೋಗುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾಕಷ್ಟು ಅಂತರದಿಂದ ಹಾರಿ ಎದುರಿನಿಂದ ಬರುತ್ತಿದ್ದ ಬೈಕ್​ ಅಡಿಗೆ ಬಿದ್ದ ದೃಶ್ಯವೊಂದು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಆ.28ರಂದು ಸಂಜೆ 4.35ರ ಸುಮಾರಿಗೆ ದ.ಕ ಜಿಲ್ಲೆಯ ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ‌ ಅಪಘಾತ ನಡೆದಿತ್ತು. ಆದರೆ ಅದೃಷ್ಟವಶಾತ್ ಆ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಹೊರತು ಯಾವುದೇ ಅಪಾಯ ಸಂಭವಿಸಿಲ್ಲ.

ಅಪಘಾತದ ದೃಶ್ಯ ಎಂಥವರ ಎದೆಯನ್ನು ಝಲ್ಲೆನಿಸುವಂತಿದ್ದು, ಕಾರಿನಲ್ಲಿರುವವರೂ, ಬೈಕ್ ಸವಾರರೂ ಸಂಪೂರ್ಣ ಭಯಭೀತರಾಗಿದ್ದೂ ದೃಶ್ಯದಲ್ಲಿ ಕಂಡು ಬರುತ್ತಿದೆ. ಬಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿರದ ಕಾರಣ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net