ಕಾಸರಗೋಡು: ವಿಭಾಗೀಯ ಅಂಚೆ ಕಚೇರಿ ಅಧೀಕ್ಷಕರ ಕಚೇರಿಯಲ್ಲಿ ಡಿ.18ರಂದು ವಿಭಾಗೀಯಮಟ್ಟದ ಡಾಕ್ ಅದಾಲತ್ ಆಯೋಜಿಸಲಾಗಿದೆ.
ಲೆಟರ್ ಪೋಸ್ಟ್, ಮನಿ ಆರ್ಡರ್, ಪಾರ್ಸೆಲ್, ಸ್ಪೀಡ್ ಪೋಸ್ಟ್ ಮತ್ತು ಸೇವಿಂಗ್ಸ್ ಬ್ಯಾಂಕ್ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು 17ರ ಮೊದಲು ಅಂಚೆ ಕಚೇರಿಗಳ ಅಧೀಕ್ಷಕರು, ಕಾಸರಗೋಡು ವಿಭಾಗ, ಕಾಸರಗೋಡು-671121 ವಿಳಾಸಕ್ಕೆ ಕಳುಹಿಸಬಹುದು ಪ್ರಕಟಣೆ ತಿಳಿಸಿದೆ.