

ಬೆಟಗೇರಿ: ಕೃಷಿ ಚಟುವಟಿಕೆಗಳ ಜತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಗುಲರ್ಬಗಾ ತರಬೇತಿ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕ ಡಾ.ನಿಖಿಲ ಜೋಶಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವಸಾಧಾರಣ ಮಹಾಸಭೆಯಲ್ಲಿ ಮಾತನಾಡಿ, ಹೈನುಗಾರಿಕೆ ರೈತರ ಬದುಕಿನ ಜೀವಾಳವಾಗಿದೆ. ಬೆಳಗಾವಿ ಹಾಲು ಒಕ್ಕೂಟದಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ರೈತರಿಗೆ ದೊರಕುವ ಸೌಲಭ್ಯ ಕುರಿತು ತಿಳಿಸಿದರು. ಮುಖ್ಯಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ ವಾರ್ಷಿಕ ವರದಿ ಮಂಡಿಸಿದರು. ಸಂಕ್ಕೆ ಅತಿ ಹೆಚ್ಚು ಹಾಲು ನೀಡಿದ ಸಂದ ಸದಸ್ಯರಿಗೆ ಬಹುಮಾನ ನೀಡಲಾಯಿತು. ಸಂದ ಅಧ್ಯ ಮಹಾದೇವ ಕಂಬಿ, ಜಿಲ್ಲಾ ಹಾಲು ಒಕ್ಕೂಟ ಗೋಕಾಕ ಟಕದ ಉಪಕೇಂದ್ರ ಅಧಿಕಾರಿ ವೀರಣ್ಣ ಕೌಜಲಗಿ, ವಿಸ್ತರಣಾಧಿಕಾರಿ ಗೋಪಾಲ ಭಂಡಾರಿ, ಬಸಪ್ಪ ತೋಟಗಿ, ಯಲ್ಲಾಲಿಂಗ ದೇಯಣ್ಣವರ, ಮಲ್ಲಿಕಾರ್ಜುನ ಪೇದನ್ನವರ, ಸಿದ್ಧೇಶ್ವರ ಕುರಬೇಟ, ಅರ್ಜುನ ಬ್ಯಾಗಿ, ಶಿವಪ್ಪ ಬಳಿಗಾರ, ಸತ್ತೆಪ್ಪ ಹೊರಟ್ಟಿ, ವಿಜಯ ಮಠದ, ಮಹಾದೇವ ಮಾಳೇದ, ಸುರೇಶ ತಳವಾರ, ಸಿದ್ದಪ್ಪ ಕೋಣಿ ಇತರರಿದ್ದರು.