

ರಾಮದುರ್ಗ: ಮನುಷ್ಯ ಇಂದು ಹಲವು ಸವಾಲುಗಳ ಮಧ್ಯೆ ತನ್ನ ಆರೋಗ್ಯದತ್ತ ಗಮನಹರಿಸದೇ ರೋಗಗಳಿಗೆ ತುತ್ತಾಗುತ್ತಿದ್ದಾನೆ ಎಂದು ಮಂಗಳೂರಿನ ಚಿಂತನಕಾರ ಡಾ.ಕೆ.ಮಾಧವ ಪೈ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ರಾಧಾಪುರ ಪೇಟೆಯ ಶ್ರೀ ಬನಶಂಕರಿ ದೇವಸ್ಥಾನದ ಸಭಾ ಭವನದಲ್ಲಿ ಭಾನುವಾರ ವಿವೇಕ ಜಾಗ್ರತ ಉಪ ಬಳಗದ 13ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ಸಿಂಚನ ಹಾಗೂ ವನಿತಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವೇಕ ಜಾಗ್ರತ ಬಳಗದ ಸೇವಕ ಎ್.ಎಸ್.ನಾಯ್ಕರ ಮಾತನಾಡಿ, ಡಿವೈನ್ ಪಾರ್ಕ್ ಸಂಸ್ಥೆಯು ರಾಷ್ಟ್ರೊತ್ಥಾನ ಪರಿಕಲ್ಪನೆ ಇಟ್ಟುಕೊಂಡು ಇಂದು ಎಲ್ಲೆಡೆ ಅರ್ಥ ಗರ್ಭಿತ ಕಾರ್ಯ ಮಾಡುತ್ತಿದೆ ಎಂದರು.
ಅಧ್ಯೆ ಸುಮನ ವಜ್ರಮಟ್ಟಿ, ಸುರೇಬಾನ ಬಳಗದ ಸತ್ತೆಮ್ಮ ಪ್ಯಾಟಿ, ಶಕುಂತಲಾ ಬರಡೂರ, ಸಾವಿತ್ರಿ ಹುರಕಡ್ಲಿ, ವಿ.ಬಿ.ಹೊನ್ನಳ್ಳಿ, ಶೋಭಾ ದಾನಪ್ಪನವರ ಇತರರಿದ್ದರು.