ಹಲಗೂರು: ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆರ್. ಪಾರ್ವತಿ ಸಂಪತ್ ಅವಿರೋಧ ಆಯ್ಕೆಯಾದರು.ಅಧ್ಯಕ್ಷ ಶಿವಣ್ಣ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಪಾರ್ವತಿ ಮಾತ್ರ
ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಚುನಾವಣಾ ಅಧಿಕಾರಿ ಹರೀಶ ಕುಮಾರ್ ಅವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನಂತರ ಮಾತನಾಡಿದ ಪಾರ್ವತಿ, ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಮೂಲ ತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ವಿವಿಧ ಇಲಾಖೆಗಳಿಂದ ದೊರಕುವ ಸೌಲಭ್ಯಗಳನ್ನು ಅರ್ಹ ಫಲಾನಿಭವಿಗಳಿಗೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಮಾಲಾಶ್ರೀ ರವಿ, ಸದಸ್ಯರಾದ ಶಿವರಾಜು, ನಾಗರಾಜು, ಆನಂದ್, ಎಂ.ರವಿ, ಶಿವಣ್ಣ, ಶ್ರುತಿ ಕುಮಾರ್, ಲಕ್ಷ್ಮೀ ಕಬ್ಬಾಳ, ನಿಂಗಮ್ಮ, ನಾಗರತ್ನ ಮಂಜು, ಪ್ರಸಾದ್, ಮುಖಂಡರಾದ ಜಿ.ಕುಮಾರ, ರವೀಶ, ಶಿವಕೆಂಚೇಗೌಡ, ಪ್ರಕಾಶ, ಎಲ್.ಸಿದ್ದರಾಜು, ಮಲ್ಲೇಶ, ಸಂಪತ್ ಕುಮಾರ ಇತರರು ಇದ್ದರು.