ಹೊಸ ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ

0208Klb02
ಕಲಬುರಗಿಯ ನಾಗನಹಳ್ಳಿಯಲ್ಲಿರುವ ಪಿಟಿಸಿಯಲ್ಲಿ ಶುಕ್ರವಾರ ನಿವೃತ್ತ ಐಪಿಎಸ್ ಅಧಿಕಾರಿ ಡಿ.ವಿ.ಗುರುಪ್ರಸಾದ ರಚಿಸಿದ ಅಪರಾಧಿಕ ಕಾನೂನುಗಳ ಕೈಪಿಡಿ ಕೃತಿಯನ್ನು ಪಿಟಿಸಿ ಪ್ರಾಚಾರ್ಯ ಡಿ.ಕಿಶೋರಬಾಬು ಮತ್ತು ಎಸ್ಪಿ ಅಡ್ಡೂರು ಶ್ರೀನಿವಾಸುಲು ಬಿಡುಗಡೆ ಮಾಡಿದರು.
Published on

ನಿವೃತ್ತ ಡಿಜಿಪಿ ಗುರುಪ್ರಸಾದ ಹೇಳಿಕೆ | ಪಿಟಿಸಿಯಲ್ಲಿ ಅಪರಾಧಿಕ ಕಾನೂನುಗಳ ಕೈಪಿಡಿ ಬಿಡುಗಡೆ ಮಾಡಿದ ಕಿಶೋರಬಾಬು ಮತ್ತು ಅಡ್ಡೂರು ಶ್ರೀನಿವಾಸುಲು



ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹಿಂದಿದ್ದ ಬ್ರಿಟಿಷ್ ಕಾನೂನುಗಳಿಗೆ ಎಳ್ಳುನೀರು ಬಿಟ್ಟು ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷÈ ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದು ನಿವೃತ್ತ ಡಿಜಿಪಿಯಾಗಿರುವ ಲೇಖಕ ಹಾಗೂ ಅಂಕಣಕಾರ ಡಿ.ವಿ.ಗುರುಪ್ರಸಾದ ಹೇಳಿದರು.
ನಗರದ ಹೊರವಲಯದ ನಾಗನಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಮೂರು ಹೊಸ ಕಾಯ್ದೆಗಳ ಕುರಿತು ಶುಕ್ರವಾರ ಉಪನ್ಯಾಸ ನೀಡಿ, ಈ ಕಾಯ್ದೆಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ತನಿಖೆ ನಡೆಸಲು, ದುಷ್ಕೃತ್ಯಗಳನ್ನು ಪತ್ತೆ ಮಾಡಲು ಅನುವು ಆಗಲಿದೆ ಎಂದರು.
೧೭೦ ವರ್ಷಗಳಿಂದ ಜಾರಿಯಲ್ಲಿದ್ದ ಬ್ರಿಟಿಷ್ ಕಾಲದ ಕಾನೂನುಗಳು ಇನ್ಮುಂದೆ ನೆನಪು ಮಾತ್ರ. ಮೊದಲಿನ ೧೭೫ ಕಾಯ್ದೆ ಉಳಿಸಿಕೊಂಡು ೮ ಹೊಸ ಕಾಯ್ದೆ ಸೇರಿಸಿ ಹೊಸ ಕಾಯ್ದೆ ರೂಪಿಸಲಾಗಿದೆ. ಸುಳ್ಳು ದೂರು ನಿಯಂತ್ರಿಸುವ ಮತ್ತು ಕಡಿಮೆ ಶಿಕ್ಷೆ ಅವಧಿಯ ಕೇಸ್‌ಗಳಿಗೆ ತಕ್ಷಣವೇ ಕೇಸ್ ದಾಖಲಿಸಿಕೊಳ್ಳದೆ, ಸತ್ಯಾಸತ್ಯತೆ ಅರಿತುಕೊಂಡು ಪ್ರಕರಣದಾಖಲಿಸುವ ಅವಕಾಶವಿದೆ ಎಂದು ಗುರುಪ್ರಸಾದ ತಿಳಿಸಿದರು.
ಪೊಲೀಸ್ ಮದ್ಯಪಾನ ಮಾಡಿ ಹಿರಿಯ ಅಧಿಕಾರಿ ಜತೆಗೆ ಅನುಚಿತವಾಗಿ ವರ್ತಿಸಿದರೆ, ಬುದ್ದಿ ಹೇಳಬಹುದೇ ಹೊರತು ಕೇಸ್ ದಾಖಲಿಸಿ ಶಿಕ್ಷೆಗೆ ಗುರಿಪಡಿಸುವಂತಿಲ್ಲ ಎಂದರು.ಡಿ.ವಿ.ಗುರುಪ್ರಸಾದ್ ಅವರು ರಚಿಸಿದ ನೂತನ ಅಪರಾಧಿಕ ಕಾನೂನುಗಳ ಕೈಪಿಡಿಯನ್ನು ಪಿಟಿಸಿ ಪ್ರಾಚಾರ್ಯ ಡಿ. ಕಿಶೋರಬಾಬು, ಮತ್ತು ಎಸ್ಪಿ ಅಡ್ಡೂರು ಶ್ರೀನಿವಾಸುಲು ಬಿಡುಗಡೆ ಮಾಡಿದರು. ಅಧಿಕಾರಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net