

ವಿಜಯವಾಣಿ ಸುದ್ದಿಜಾಲ ಶಹಾಬಾದ್
ಮಕ್ಕಳು ತಮ್ಮ ಪಠ್ಯದೊಂದಿಗೆ ನಮ್ಮ ಇತಿಹಾಸದ ಅಧ್ಯಾಯನ ಕುರಿತು ವಿಶೇಷ ಅಸಕ್ತಿ ತೋರಿದಾಗ ಮಾತ್ರ ನಮ್ಮಪರಂಪರೆ, ಸಂಸ್ಕೃತಿ, ಐತಿಹಾಸಿಕ ವೈಭವಗಳನ್ನು ತಿಳಿಯಲು ಸಾಧ್ಯ ಎಂದು ಹಿರಿಯ ಸಂಶೋಧಕರ ಡಿ.ಎನ್.ಅಕ್ಕಿ ಹೇಳಿದರು.
ಅವರು ಸೋಮವಾರ ರಾವೂರನ ಶ್ರೀಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದರ ಸಾಧಕರೊಂದಿಗೆ ಮಾತುಕತೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡುತ್ತ, ನಮ್ಮ ಸ್ಮಾರಕರಗಳು ಅಂದಿನ ಜೀವನ ಶೈಲಿ, ಸಂಸ್ಕೃತಿ, ಆಹಾರ ಪದ್ದತಿ, ಭಾಷೆಯ ಕುರಿತು ಬೆಳಕನ್ನು ಚಲ್ಲುತ್ತವೆ, ಅಂದಿನ ಜನಪದ, ಕಲೆ, ಸಾಹಿತ್ಯವನ್ನು ಸ್ಮಾರಕಗಳ ಅಧ್ಯಾಯನದಿಂದ ತಿಳಿಯಲು ಸಾಧ್ಯ ಎಂದು ಹೇಳಿ, ನಮಗೆ ಕೇವಲ ಬೇಲೂರ, ಹಳೆಬೀಡು, ದಕ್ಷಿಣ ಕರ್ನಾಟಕದ ಸ್ಮಾರಕರಗಳಿಗೆ ಪ್ರಾಮುಖ್ಯತೆ ನೀಡಿ ಬಿಂಬಿಸಲಾಗುತ್ತಿದೆ, ಅದರೆ, ನಮ್ಮ ಭಾಗದಲ್ಲಿ ಶ್ರೀಮಂತವಾಗಿರುವ ಸ್ಮಾರಕಗಳು ಇನ್ನೂ ಎಲೆ, ಮರೆಯ ಕಾಯಿಯಾಗಿ ಉಳಿದಿವೆ. ಇಲ್ಲಿಯ ಸಂಶೋಧಕರು, ಉತ್ಸಾಹಿ ವಿದ್ಯಾರ್ಥಿಗಳು ಹಸಿವು, ಧೂಳು, ದಣಿವು ಲೆಕ್ಕಿಸದೆ, ಸ್ಮಾರಕಗಳು, ನಾಣ್ಯ, ಲಿಪಿಗಳನ್ನು ಉಳಿಸಿ, ಮುಂದಿನ ಪೀಳಿಗೆಗಳಿಗೆ ತಿಳಿಸುವ ಕೆಲಸವಾಗಬೇಕಾಗಿದೆ. ಈ ಭಾಗದ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಐತಿಹಾಸಿಕ ಸ್ಮಾರಕಗಳನ್ನು ತೋರಿಸುವ ಮೂಲಕ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ ಮಾತನಾಡಿದರು. ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ನಾಗಯ್ಯ ಸ್ವಾಮಿ ಅಲ್ಲೂರ ವೇದಿಕೆ ಮೇಲೆ ಇದ್ದರು. ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳು, ಶಿಕ್ಷಕರು ವಿವಿಧ ಪ್ರಶ್ನೆಗಳಿಗೆ ಅಕ್ಕಿಯವರು ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಕೆ.ರಮೇಶ ಭಟ್ಟ, ಚಂದ್ರಶೇಖರ ಬಳ್ಳಾ, ಕಸಾಪ ಗೌರವ ಕಾರ್ಯದರ್ಶಿ ಶರಣು ವಸ್ತçದ, ಮುಖ್ಯಗುರು ವಿದ್ಯಾಧರ ಖಂಡಾಳ, ಶಿಕ್ಷಕರಾದ ಶಿವುಕುಮಾರ ಸರಡಗಿ, ಬಸವರಾಜ ರಾಠೋಡ, ಮಂಜುಳಾ ಪಾಟೀಲ, ದತ್ತು ಗುತ್ತೇದಾರ ಪಾಲ್ಗೊಂಡಿದ್ದರು. ಶಿಕ್ಷಕಿ ಭುವನೇಶ್ವರಿ ನಿರೂಪಿಸಿದರು. ರಶ್ಮಿಕಾ ಪ್ರಾರ್ಥಿಸಿದಳು, ಸಿದ್ದಲಿಂಗ ಬಾಳಿ ಸ್ವಾಗತಿಸಿದರು.