ಅಧ್ಯಕ್ಷರಾಗಿ ಡಿ.ಎಂ. ಗೋಪಾಲಕೃಷ್ಣ ಆಯ್ಕೆ

ಅಧ್ಯಕ್ಷರಾಗಿ ಡಿ.ಎಂ. ಗೋಪಾಲಕೃಷ್ಣ ಆಯ್ಕೆ
Published on

ಸೋಮವಾರಪೇಟೆ: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಡಿ.ಎಂ. ಗೋಪಾಲಕೃಷ್ಣ ಆಯ್ಕೆಯಾದರು.

ಪ್ರಮೀಳಾ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ನಿಗದಿಯಾಗಿತ್ತು. ಗೋಪಾಲಕೃಷ್ಣ 6 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಎದುರಾಳಿ ಬಿಜೆಪಿ ಬೆಂಬಲಿತ ಅನುಕುಮಾರ್ 3 ಮತಗಳನ್ನು ಪಡೆದು ಪರಾಭವಗೊಂಡರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧೇಗೌಡ ಚುನಾವಣಾ ಕಾರ್ಯ ನಡೆಸಿಕೊಟ್ಟರು.

ಪಂಚಾಯಿತಿ ಉಪಾಧ್ಯಕ್ಷೆ ರಶೀದ, ಸದಸ್ಯ ಪೊನ್ನಪ್ಪ, ಶಿವಾನಂದ, ವಸಂತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net