ಸಾಲ ವಸೂಲಾತಿಯಲ್ಲಿ ದ.ಕ.ಕ್ಕೆ ಅಗ್ರಸ್ಥಾನ

Btw_Vishanthi
Published on

ಬಂಟ್ವಾಳ: ದ.ಕ. ಬ್ಯಾಂಕ್​ಗಳ ತವರೂರು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಬಲಾಢ್ಯವಾಗಿ ಬೆಳೆದಿದ್ದು, ಇಡೀ ದೇಶದಲ್ಲಿ ಶೇ.100 ಸಾಲ ಮರುಪಾವತಿಯಾಗುವ ಜಿಲ್ಲೆಯಿದ್ದರೆ ಅದು ದ.ಕ. ಮಾತ್ರ ಎಂದು ಕರ್ನಾಟಕ ಸಹಕಾರ ಮಾರಾಟ ಮಹಾಮಂಡಲ ಬೆಂಗಳೂರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ಅಧ್ಯಕ್ಷ ಡಾ.ಎಂ.ಎನ್​.ರಾಜೇಂದ್ರ ಕುಮಾರ್​ ಹೇಳಿದರು.

ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂ ಬಂಟ್ವಾಳ ಇದರ ವಿಂಶತಿ ಸಂಭ್ರಮ ಸದಸ್ಯರ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಸಹಕಾರಿ ಮನೋಭಾವ ಹೃದಯದಲ್ಲಿ ಬರಬೇಕು, ಜನರಿಗೆ ಆರ್ಥಿಕ ಸಮೃದ್ದಿ ಕೊಡಲು ಸಹಕಾರಿ ಸಂಘಗಳಿಂದ ಸಾಧ್ಯವಾಗಿದೆ ಎಂದರು.

ಮಾಜಿ ಸಚಿವ ಬಿ.ರಮನಾಥ ರೈ ಅಶಕ್ತರಿಗೆ ಸಹಾಯಧನ ವಿತರಿಸಿ ಮಾತನಾಡಿ, ದ.ಕ. ವರ್ತಕರ ಸಂಘ ಒಳ್ಳೆಯ ಸಹಕಾರಿ ಸಂವಾಗಿ ಬೆಳೆದು ಬರುತ್ತಿದ್ದು ಅವಿಭಜಿತ ದ.ಕ. ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿಂದು ಹೆಸರುವಾಸಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಶಕ್ತರಿಗೆ ಧನ ಸಹಾಯ ನೀಡಲಾಯಿತು. ಡಾ. ಎಂ.ಎನ್​. ರಾಜೇಂದ್ರ ಕುಮಾರ್​, ಮಾಜಿ ಸಚಿವ ಬಿ. ರಮಾನಾಥ ರೈ, ಸಂಘ ಅಧ್ಯಕ್ಷ ಸುಭಾಶ್ಚಂದ್ರ ಜೈನ್​, ಸಹಕಾರಿ ಸುದರ್ಶನ್​ ಜೈನ್​ ಸೇರಿದಂತೆ, ಸಂಘದ ಆರಂಭಿಕ ಪ್ರವರ್ತಕರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಗೌರವಿಸಲಾಯಿತು. 13 ಶಾಖೆಗಳ ಅದೃಷ್ಟವಂತ ಗ್ರಾಹಕರಿಗೆ ಬಹುಮಾನ ನೀಡಲಾಯಿತು, ಸವ್ಯಸಾಚಿ ಶಾಖೆಯನ್ನು ಅಭಿನಂದಿಸಲಾಯಿತು.

ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್​, ಮಂಗಳೂರಿನ ಧವಳ ಕೋ&ಆಪರೇಟಿವ್​ ಸೊಸೈಟಿ ಅಧ್ಯಕ್ಷ ಸುದರ್ಶನ್​ ಜೈನ್​ ಅಧ್ಯಾಪಕರ ಸಹಕಾರಿ ಸಂಘ ವಿಟ್ಲ ಇದರ ಅಧ್ಯಕ್ಷ ರಮೇಶ್​ ನಾಯಕ್​ ರಾಯಿ, ಪಾಣೆಮಂಗಳೂರಿನ ಸುಮಂಗಲ ಕ್ರೆಡಿಟ್​ ಕೋ ಅಪರೇಟಿವ್​ ಸೊಸೈಟಿ ಅಧ್ಯಕ್ಷ ನಾಗೇಶ್​ ಕಲ್ಲಡ್ಕ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್​ ಬೋಳಾರ್​ ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರಿ ಸಂಘದ ಅಧ್ಯಕ್ಷ ಕೆ. ಜಯಂತ್​ ನಾಯಕ್​, ಬೆಳ್ತಂಗಡಿಯ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್​, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ದೇವಾಡಿಗ, ಸಂಘದ ಉಪಾಧ್ಯಕ್ಷ ಮಂಜುನಾಥ ರೈ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್​ ಕುಮಾರ್​ ಜೈನ್​ ಉಪಸ್ಥಿತರಿದ್ದರು.

ನಿರ್ದೇಶಕರಾದ ದಿವಾಕರ ದಾಸ್​ ಸ್ವಾಗತಿಸಿದರು, ಲೋಕೇಶ್​ ಸುವರ್ಣ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

ವಿಂಶತಿ ಕಾರ್ಯಕ್ರಮ ಆಚರಣೆ

ವರ್ತಕರು ಗ್ರಾಹಕರ ನಡುವೆ ಬಾಂಧವ್ಯ ಉತ್ತಮಪಡಿಸುವ ಉದ್ದೇಶದಿಂದ ಹಾಗೂ ವರ್ತಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿಂಶತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್​ ತಿಳಿಸಿದರು.

ಸಹಕಾರ ಸಂಘ ಸ್ಥಾಪಿಸುವುದು ಸುಲಭ, ಆದರೆ ಮುನ್ನಡೆಸುವುದು ಕಷ್ಟ. ದ.ಕ.ವರ್ತಕರ ವಿವಿಧೋದ್ದೇಶ ಸಹಕಾರಿ ಸಂ ಆರಂಭಗೊಂಡು ಇದೀಗ 20 ವರ್ಷದ ಸಂಭ್ರಮ ಆಚರಿಸುತ್ತಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ. ಡಾ.ಎಂ.ಎನ್​.ರಾಜೇಂದ್ರ ಕುಮಾರ್​, ದಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ಅಧ್ಯಕ್ಷ

ಡಾ.ಎಂ.ಎನ್​.ರಾಜೇಂದ್ರ ಕುಮಾರ್​, ದಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net