ಸುಳ್ಯದಲ್ಲಿ ವೈಭವದ ಶಾರದಾಂಬಾ ದಸರಾ

Published on

ಸುಳ್ಯ: ಶ್ರೀ ಶಾರದಾಂಬಾ ದಸರಾ ಉತ್ಸವ ಅ.9ರಿಂದ 17ರವರೆಗೆ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದ ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ಜರುಗಲಿದೆ ಎಂದು ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ತಿಳಿಸಿದ್ದಾರೆ.

ಈ ಬಾರಿಯ ಸುಳ್ಯದ ಶಾರದಾಂಬ ಉತ್ಸವವು ಪ್ರತಿ ವರ್ಷಕ್ಕಿಂತ ಹೆಚ್ಚಿನ ವಿಜೃಂಭಣೆಯಿಂದ ಪೂರ್ತಿ ದಿನ ಮಹಿಳಾ ದಸರಾ -2024 ಜರುಗಲಿದೆ. ಆ ದಿನ ಸ್ಟಾಲ್​ಗಳಲ್ಲಿ ತಾಲೂಕಿನ ಮಹಿಳೆಯರು ಮನೆಯಿಂದ ತಯಾರಿಸಿಕೊಂಡು ಬಂದ ವಿಶೇಷ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಗೃಹ ತಯಾರಿಕಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಸೇರಿದಂತೆ ಆ ದಿನದಂದು ಮಹಿಳೆಯರಿಂದಲೇ ಸಾಂಸತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿ 15 ರಿಂದ 20 ಟ್ಯಾಬ್ಲೋ ಇರಲಿದ್ದು, ಮಹಿಳಾ ಸಮಿತಿ ವತಿಯಿಂದಲೂ ಈ ಬಾರಿ ಟ್ಯಾಬ್ಲೋ ಇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುರುಕಿರಣ್​, ಅರ್ಜುನ್​ ಜನ್ಯ, ವಿಜಯಪ್ರಕಾಶ್​ ಭಾಗವಹಿಸುವ ನಿರೀಕ್ಷೆ ಇದೆ. ಸಾಂಸತಿಕ ಕಾರ್ಯಕ್ರಮದ ಕೊನೆ ದಿನ ನಡೆಯುವ ಸಂಗೀತ ರಸಮಂಜರಿಯಲ್ಲಿ ಸರಿಗಮಪ ಸೀಸನ್​ 20ರ ವಿಜೇತ ದರ್ಶನ್​ ನಾರಾಯಣ್​ ನೇತೃತ್ವದ ಐದಾರು ಮಂದಿ ಸ್ಟಾರ್​ ಸಿಂಗರ್​ಗಳನ್ನು ಆಹ್ವಾನಿಸಲಾಗಿದೆ ಎಂದು ನಾರಾಯಣ ಕೇಕಡ್ಕ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net