ಡಿ.ಕೆ. ಚೌಟ ನೆನಪಿನಲ್ಲಿ ನಾಟಕ ಪ್ರದರ್ಶನ

Rangachandira - D K Chowta
Published on

ಬೆಂಗಳೂರು: ರಂಗ ಚಂದಿರ ಟ್ರಸ್ಟ್ ಬೆಂಗಳೂರು, ನಾಟಕಕಾರ ಡಾ. ಡಿ.ಕೆ. ಚೌಟ ನೆನಪಿನ ಅಂಗವಾಗಿ ಕನ್ನಡ ಭವನದ ನಯನ ಸಭಾಂಗಣದಲ್ಲಿ ಜೂ. 1ರಂದು ಸಂಜೆ 5ಕ್ಕೆ ಕಾಸರಗೋಡು ಚಿನ್ನಾ ನಿರ್ದೇಶನದ ಎರಡು ನಾಟಕಗಳ ಪ್ರದರ್ಶನ ಏರ್ಪಡಿಸಿದೆ.

ಕಾರ್ಯಕ್ರಮವನ್ನು ಹಿರಿಯ ನಟ ಸುಂದರ್ ರಾಜ್ ಉದ್ಘಾಟಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ನಿಯೋಜಿತ ಅಧ್ಯಕ್ಷ ಕೆ. ವಿ. ನಾಗರಾಜ್ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ನಾ ದಾಮೋದರ್ ಶೆಟ್ಟಿ , ಶಶಿಧರ ಅಡಪ, ಆರ್. ನರೇಂದ್ರಬಾಬು, ಆರ್.ಕೆ. ಹೆಗಡೆ ಮೊದಲಾದವರು ಭಾಗವಹಿಸಲಿದ್ದಾರೆ.

ಇದೇ ವೇಳೆ ಡಿ.ಕೆ. ಚೌಟರ ನೆನಪಿನಲ್ಲಿ ಅವಿರತ ಹರೀಶ್, ನಯನ ರಾಜು ಮತ್ತು ಎಸ್. ತಿಮ್ಮಯ್ಯ ಅವರಿಗೆ ರಂಗ ಗೌರವ ನೀಡಲಾಗುವುದು. ಬಳಿಕ ರಂಗ ಚಿನ್ನಾರಿ ಕಾಸರಗೋಡು ತಂಡದಿಂದ ‘ಒಬ್ಬ ಇನ್ನೊಬ್ಬ’ ಮತ್ತು ‘ಸಿದ್ಧತೆ’ ಎರಡು ನಾಟಕಗಳು ಪ್ರದರ್ಶನ ಕಾಣಲಿದೆ ಎಂದು ಟ್ರಸ್ಟ್‌ನ ಜಿಪಿಒ ಚಂದ್ರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net