ಜೆಡಿಎಸ್ ಸೇರಿದ ಗ್ರಾಪಂ ಸದಸ್ಯರಿಂದ ಖಾಲಿ ಚೆಕ್ ಪಡೆದ್ರಾ ಶಾಸಕರು? ಏನಿದರ ಒಳಗುಟ್ಟು?

DC Thammanna
Published on

ಮಂಡ್ಯ: ಜೆಡಿಎಸ್ ಸೇರಿದ ಗ್ರಾಮ ಪಂಚಾಯಿತಿ ಸದಸ್ಯರಿಂದ ಮಾಜಿ ಸಚಿವ ಹಾಗೂ ಮದ್ದೂರು ಕ್ಷೇತ್ರದ ಹಾಲಿ ಶಾಸಕ ಡಿ.ಸಿ. ತಮ್ಮಣ್ಣ ಅವರು ಖಾಲಿ ಚೆಕ್ ಪಡೆದರಾ? ಎಂಬ ಅನುಮಾನ ಮೂಡತೊಡಗಿದೆ.

ಗ್ರಾ.ಪಂ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್​ ಬೆಂಬಲಿಸಿದ ಸದಸ್ಯರು ಖಾಲಿ ಚೆಕ್​ಗೆ ಸಹಿ ಹಾಕುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಸಕರು ಖಾಲಿ ಚೆಕ್‌ಗೆ ಸಹಿ ಪಡೆದು ಪಕ್ಷಕ್ಕೆ ಸೇರಿಸಿಕೊಂಡರಾ ಎಂಬ ಸಂಶಯ ಮೂಡಿದೆ.

ಡಿ.ಸಿ.ತಮ್ಮಣ್ಣ ಅವರು ಸದಸ್ಯರಿಂದ ಚೆಕ್, ಪ್ರನೋಟ್‌ಗೆ ಸಹಿ ಪಡೆಯುತ್ತಿರುವ ಫೋಟೋ ಮತ್ತು ಖಾಲಿ ಚೆಕ್‌ಗೆ ಸಹಿ ಪಡೆದ ಬಳಿಕ ಸದಸ್ಯರಿಗೆ ಜೆಡಿಎಸ್​ ಶಾಲು ಹಾಕಿರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಜೆಡಿಎಸ್​ ಪ್ರಾಬಲ್ಯವಿರದ ಗ್ರಾ.ಪಂಗಳಲ್ಲಿ ಸದಸ್ಯರಿಗೆ ಹಣ ಕೊಟ್ಟು ಅಧಿಕಾರ ಹಿಡಿದರಾ ಶಾಸಕರು? ಎಂಬ ಪ್ರಶ್ನೆಗಳು ಕೇಳಿಬಂದಿವೆ. ಅಲ್ಲದೆ, ಹಣ ಪಡೆದ ಸದಸ್ಯರು ಬೇರೆ ಪಕ್ಷ ಬೆಂಬಲಿಸದಂತೆ ಮಾಡಲು ಶಾಸಕರು ಖಾಲಿ ಚೆಕ್ ಪಡೆದಿದ್ದಾರೆಂದು ಹೇಳಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net