More

    ದೆಹಲಿಯಿಂದ ಆಸ್ಟ್ರೇಲಿಯಾಕ್ಕೆ ಹೊರಟಿದ್ದ ಬಣ್ಣಬಣ್ಣದ ಲೆಹೆಂಗಾಗಳಲ್ಲಿ ಏನು ಅಡಗಿತ್ತು ಗೊತ್ತಾ ?!

    ನವದೆಹಲಿ: ದೆಹಲಿಯಿಂದ ಇತ್ತೀಚೆಗೆ ಆಸ್ಟ್ರೇಲಿಯಾಕ್ಕೆ ಹೊರಟ ಬಣ್ಣಬಣ್ಣದ ಲೆಹೆಂಗಾಗಳ ಸರಕನ್ನು ಕಸ್ಟಮ್​ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಕಾರಣ ಕೇಳಿದರೆ ಬೆಚ್ಚು ಬೀಳುತ್ತೀರಿ…. ಬಣಬಣ್ಣದ ಕಸೂತಿ ಕಲೆಯುಳ್ಳ ಈ ಲೆಹೆಂಗಾಗಳ ಮೇಲಿದ್ದ ಕಸುಬುಗಾರಿಕೆಯಲ್ಲಿ ಡ್ರಗ್ಸ್ ಅಡಗಿತ್ತು! ಹೌದು, ಬಟ್ಟೆಯನ್ನು ರಫ್ತು ಮಾಡುವ ಸೋಗಿನಲ್ಲಿ ಎಂಡಿಎಂಎ ಡ್ರಗ್ಸ್​ನ ಬೃಹತ್ ಕಂಸೈನ್​ಮೆಂಟ್​ ಒಂದು ರವಾನೆಯಾಗಲು ಸಿದ್ಧವಾಗಿತ್ತು.

    ಬೇಹುಗಾರರ ಸುಳಿವಿನ ಮೇರೆಗೆ ದೆಹಲಿಯ ಫಾರಿನ್ ಪೋಸ್ಟ್​ ಆಫೀಸಿ(ಎಫ್​ಪಿಒ)ನಲ್ಲಿ ಆಸ್ಟ್ರೇಲಿಯಾಕ್ಕೆ ಕಳುಹಿಸಲಾಗುತ್ತಿದ್ದ ಕನ್​ಸೈನ್ಮೆಂಟ್ ಒಂದನ್ನು ಕಸ್ಟಮ್ಸ್ ಅಧಿಕಾರಿಗಳು ತೆರೆದು ನೋಡಿದರು. ಅದರಲ್ಲಿ ಬಣ್ಣಬಣ್ಣದ ಕಲಾಗಾರಿಕೆ ಹೊಂದಿದ್ದ ಭಾರತದ ಪಾರಂಪರಿಕ ಮಹಿಳಾ ಉಡುಗೆಗಳಾದ ಲೆಹೆಂಗಾಗಳು ಇದ್ದವು. ಸೂಕ್ಷ್ಮವಾಗಿ ಗಮನಿಸಿದಾಗ ಆ ಲೆಹೆಂಗಾಗಳ ಆಕರ್ಷಕ ಲೇಸ್​ಗಳ ನಡುವೆ ಎಂ​ಡಿಎಂಎ ಎಂಬ ಸಿಂಥೆಟಿಕ್ ಡ್ರಗ್​ಅನ್ನು ಬಚ್ಚಿಟ್ಟಿರುವುದು ಬೆಳಕಿಗೆ ಬಂತು. 

    ಇದನ್ನೂ ಓದಿ: ಲಿಕ್ಕರ್​ ಮಾಫಿಯಾ ಮಟ್ಟಹಾಕಲು ಹೋದ ಪೇದೆ​ಯ ಹತ್ಯೆ, ಎಸ್​ಐ ಸ್ಥಿತಿ ಗಂಭೀರ: ಸಿಎಂ ಯೋಗಿ ಖಡಕ್​ ಆದೇಶ

    ಎಕ್ಸ್​ಟೆಸಿ ಎಂದೇ ಜನಪ್ರಿಯವಾದ ಎಂಡಿಎಂಎ, ಮೆದುಳನ್ನು ಉತ್ತೇಜಿತಗೊಳಿಸುವುದರೊಂದಿಗೆ ಭ್ರಮೆ ಉಂಟುಮಾಡುತ್ತದೆ. ಇದನ್ನು ಸೇವಿಸುವುದರಿಂದ ಲಿವರ್, ಕಿಡ್ನಿ ಮತ್ತು ಹಾರ್ಟ್​ ಫೇಲ್ಯೂರ್ ಇಲ್ಲವೇ ಸಾವು ಕೂಡ ಸಂಭವಿಸಬಹುದು.

    ಈ ಲೆಹೆಂಗಾಗಳಿಂದ ಒಟ್ಟು 3,900 ಗ್ರಾಂ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಈ ಡ್ರಗ್ಸ್​ನ ಮಾರಾಟ ಬೆಲೆಯು 1.7 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ. ಮತ್ತೊಂದು ಪತ್ತೆ ಕಾರ್ಯದಲ್ಲಿ, ದೆಹಲಿ ಕಸ್ಟಮ್ಸ್ ಅಧಿಕಾರಿಗಳು 60 ಲಕ್ಷ ಇಂಪೋರ್ಟೆಡ್​ ಸಿಗರೇಟು ಸ್ಟಿಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳ ಮೌಲ್ಯ 6 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)

    ಸಾವಿಗೂ ಮುನ್ನ ಕೈ ಬೆಸೆದ ವೃದ್ಧ ದಂಪತಿ: ಮನಕಲಕುವ ಫೋಟೋ ನೋಡಿ ನೆಟ್ಟಿಗರಿಂದ ಕರೊನಾಗೆ ಹಿಡಿ ಶಾಪ!​

    ಚಾಲನಾ ಪರವಾನಗಿ ಆನ್​ಲೈನ್ ನವೀಕರಣಕ್ಕೆ ಆಧಾರ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts