ಕೇಂದ್ರ ವಾಣಿಜ್ಯ ಪ್ರದೇಶದಲ್ಲೂ ಸೈಕಲ್​ ಪಥ

Cycle path in bengaluru 600 400
Published on

ಬೆಂಗಳೂರು: ಪರಿಸರ ಸಂರಕ್ಷಣೆ ದೃಷ್ಟಿಯಿಂದ ವಾಹನ ಸಂಚಾರ ಕಡಿಮೆ ಮಾಡುವ ಉದ್ದೇಶದಿಂದ ನಿಮಿರ್ಸಲಾಗುತ್ತಿರುವ ಸೈಕಲ್​ ಪಥ ಹೊರವರ್ತುಲ ರಸ್ತೆಯಷ್ಟೇ ಅಲ್ಲದೆ, ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ)ಗಳಲ್ಲೂ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ನಗರ ಭೂಸಾರಿಗೆ ನಿರ್ದೇಶನಾಯ ಬಿಬಿಎಂಪಿ ಸಹಕಾರದೊಂದಿಗೆ ಸೈಕಲ್​ ಪಥ ಅನುಷ್ಠಾನಗೊಳಿಸುತ್ತಿದೆ.

ಅದರಂತೆ ಹೊರವರ್ತುಲ ರಸ್ತೆಯ ಸರ್ವೀಸ್​ ರಸ್ತೆಯಲ್ಲಿ ಈಗಾಗಲೆ ಪಥ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಅದರ ಜತೆಗೆ ಇದೀಗ ಹೆಚ್ಚುವರಿಯಾಗಿ 6 ಮಾರ್ಗಗಳಲ್ಲಿ ಸೈಕಲ್​ ಸವಾರಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಈ ಯೋಜನೆ ಜಾರಿಗೆ ಸ್ಮಾರ್ಟ್​ಸಿಟಿ ಅನುದಾನವೂ ಬಳಸಿಕೊಳ್ಳುವ ಕುರಿತು ಚಿಂತನೆ ನಡೆಸಲಾಗಿದೆ.

ಸಿಬಿಡಿ ಪ್ರದೇಶದಲ್ಲಿ ಅನುಷ್ಠಾನ: ಈಗಾಗಲೆ ಗುರುತಿಸಿರುವ ಮಾರ್ಗಗಳು ಹೊರವರ್ತುಲ ರಸ್ತೆ ಮತ್ತು ಸಿಬಿಡಿ ಪ್ರದೇಶದ ನಡುವೆ ಸಂಪರ್ಕ ಕಲ್ಪಿಸುವಂತೆ ನಿರ್ಮಾಣಗೊಳ್ಳಲಿವೆ. ಆಮೂಲಕ ಹೊರವರ್ತುಲ ರಸ್ತೆಯಲ್ಲಿನ 16.9 ಕಿ.ಮೀ. ಹೊರತುಪಡಿಸಿ ಹೆಚ್ಚುವರಿಯಾಗಿ 18.24 ಕಿ.ಮೀ. ಉದ್ದದ ಸೈಕಲ್​ ಪಥ ನಿಮಿರ್ಸಲಾಗುತ್ತದೆ. ಸದ್ಯ ಬಿಬಿಎಂಪಿ ಡಲ್ಟ್​ಗೆ ಪ್ರಸ್ತಾವನೆ ಕಳುಹಿಸಿದೆ. ಅಲ್ಲಿಂದ ಅನುಮತಿ ದೊರೆತ ನಂತರ ಸ್ಮಾರ್ಟ್​ಸಿಟಿ ಲಿ.ಗೆ ಪ್ರಸ್ತಾವನೆ ಸಲ್ಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, 2021ರ ಮಾರ್ಚ್​ ವೇಳೆಗೆ 35 ಕಿ.ಮೀ. ಉದ್ದದ ಮಾರ್ಗದಲ್ಲಿ ಸೈಕಲ್​ ಪಥ ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ.

ಯಾವೆಲ್ಲ ಮಾರ್ಗದಲ್ಲಿ ಸೈಕಲ್​ ಪಥ:
ದೊಮ್ಮಲೂರು ಮೇಲ್ಸೇತುವೆಯಿಂದ ಹೊಸೂರು ರಸ್ತೆ: 5.4 ಕಿ.ಮೀ.
ಸ್ವಾಮಿ ವಿವೇಕಾನಂದ ರಸ್ತೆಯಿಂದ ಸಿಲ್ಕ್​ಬೋರ್ಡ್​ ಜಂಕ್ಷನ್​: 2.59 ಕಿ.ಮೀ.
ಹಳೆ ಮದ್ರಾಸ್​ ರಸ್ತೆಯಿಂದ ಡಿ.ಭಾಸ್ಕರನ್​ ರಸ್ತೆ: 5.37 ಕಿ.ಮೀ.
ಸ್ವಾಮಿ ವಿವೇಕಾನಂದ ರಸ್ತೆಯಿಂದ ಟ್ರಿನಿಟಿ ಚರ್ಚ್​ ರಸ್ತೆ: 1.98 ಕಿ.ಮೀ.
ಡಿ.ಭಾಸ್ಕರನ್​ ರಸ್ತೆಯಿಂದ ಎಸಿಎಸ್​ ಜಂಕ್ಷನ್​: 647.32 ಮೀ.
ಎಸ್​ಇಎಸ್​ ಜಂಕ್ಷನ್​ನಿಂದ ದೊಮ್ಮಲೂರು: 2.53 ಕಿ.ಮೀ.
ಹೊರವರ್ತುಲ ರಸ್ತೆ: 16.92 ಕಿ.ಮೀ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net