

ಕೈಲಾಂಚ: ಸಾಮೂಹಿಕ ಮದುವೆಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಹೊಸ ಹೊಸ ಸಂಬಂಧ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.
ಕೈಲಾಂಚ ಹೋಬಳಿಯ ಕವಣಾಪುರ ಗ್ರಾಮದ ಪಟ್ಟಲದಮ್ಮ ದೇವಾಲಯದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ನವ ದಂಪತಿಗೆ ಶುಭ ಹಾರೈಸಿ ಮಾತನಾಡಿದರು.
ಸಾಮೂಹಿಕ ವಿವಾಹಗಳು ಒಂದೇ ಸೂರಿನಡಿ ಜಾತಿ, ಮತ, ಭೇದ, ಅದ್ದೂರಿ, ಆಡಂಬರದಿಂದ ಮುಕ್ತಗೊಂಡು ನಡೆಯುವುದರಿಂದ ಪಾಲ್ಗೊಳ್ಳುವ ಜನರಲ್ಲಿಯೂ ಸಮಾನತೆಯ ಭಾವನೆ ಮೂಡುತ್ತದೆ. ಹಿಂದು ಧಾರ್ಮಿಕ ಸಂಪ್ರದಾಯದಲ್ಲಿ ಅನೇಕ ಸಂಸ್ಕಾರ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ ವಿವಾಹ ಮದುವೆ
ಕಾರ್ಯಕ್ರಮಗಳು ಜನರನ್ನು ಒಟ್ಟುಗೂಡಿಸಿ ಸ್ನೇಹ ಭಾಂಧವ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿವೆ ಎಂದರು.
ಐದು ಜೋಡಿಗಳು ಸಪ್ತಪದಿ ತುಳಿದರು. ಕಸ್ತೂರಿನ ಕರ್ನಾಟಕ ರಾಣಾ ಸೇನೆ ಕಾರ್ಯಕ್ರಮ ಆಯೋಜಿಸಿತ್ತು. ಎಲ್ಲರಿಗೂ ದೇವಾಲಯದ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.