ಒಪ್ಪಂದದ ಮೇರೆಗೆ ಪಡೆಯುವ ಬಸ್​ ಪ್ರಯಾಣ ದರ ಇಳಿಕೆ

Bus
Published on

ಬೆಂಗಳೂರು: ವಿವಾಹ, ಪ್ರವಾಸ ಸೇರಿ ಇನ್ನಿತರ ಉದ್ದೇಶಗಳಿಗಾಗಿ ಒಪ್ಪಂದದ ಮೇಲೆ ಕೆಎಸ್​ಆರ್​ಟಿಸಿ ಒದಗಿಸುವ ಪ್ರೀಮಿಯಂ ಬಸ್​ಗಳ ಒಪ್ಪಂದದ ದರವನ್ನು ಇಳಿಕೆ ಮಾಡಲಾಗಿದೆ.

47ರಿಂದ 49 ಆಸನದ ಐರಾವತ ಕ್ಲಬ್​ ಕ್ಲಾಸ್​ (ಬಿಎಸ್​ 3) ಬಸ್​​ನ ಒಪ್ಪಂದ ದರವನ್ನು ಪ್ರತಿ ಕಿ.ಮೀ.ಗೆ 5ರಿಂದ 7 ರೂ.ವರೆಗೆ ಹಾಗೂ ಕನಿಷ್ಠ ಕಿ.ಮೀ.ಅನ್ನು 500ರಿಂದ 400 ಕಿ.ಮೀ.ಗೆ ಇಳಿಸಲಾಗಿದೆ. 47 ಆಸನದ ಐರಾವತ ಕ್ಲಬ್​ ಕ್ಲಾಸ್​ (ಬಿಎಸ್​ 4) ಬಸ್ಸಿನ ಒಪ್ಪಂದ ದರವನ್ನು ಪ್ರತಿ ಕಿ.ಮೀ.ಗೆ 5ರಿಂದ 10 ರೂವರೆಗೆ, 51 ಆಸನಗಳ ಐರಾವತ ಕ್ಲಬ್​ ಕ್ಲಾಸ್​ ದರವನ್ನು ಪ್ರತಿ ಕಿ.ಮೀ.ಗೆ 10 ರೂ.ವರೆಗೆ ಇಳಿಕೆ ಮಾಡಲಾಗಿದೆ. ಅದೇ ರೀತಿ 32 ಆಸನಗಳ ಸ್ಲೀಪರ್​ ಬಸ್​ ಒಪ್ಪಂದ ದರವನ್ನು ಪ್ರತಿ ಕಿ.ಮೀ.ಗೆ 5ರಿಂದ 6 ರೂ. ಹಾಗೂ 40 ಆಸನಗಳ ಫ್ಲೈ ಬಸ್​ ಒಪ್ಪಂದ ದರವನ್ನು ಪ್ರತಿ ಕಿ.ಮೀ.ಗೆ 10ರಿಂದ 16 ರೂ.ವರೆಗೆ ಕಡಿಮೆ ಮಾಡಲಾಗಿದೆ ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net