

ಚನ್ನಮ್ಮನ ಕಿತ್ತೂರು: ಹುಕ್ಕೇರಿ ಅರ್ಬನ್ ಕೋ&ಆಪ್ ಬ್ಯಾಂಕ್ 97 ವರ್ಷದಿಂದ ಜನಸೇವೆ ಮಾಡುವ ಮೂಲಕ ಉನ್ನತ ಸ್ಥಾನ ಪಡೆದಿದೆ ಎಂದು ಹುಕ್ಕೇರಿ ಅರ್ಬನ್ ಬ್ಯಾಂಕ್ ಅಧ್ಯ ಚಂದ್ರಶೇಖರ ಪಾಟೀಲ ಹೇಳಿದರು.
ಪಟ್ಟಣದ ಗುರುವಾರಪೇಟೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಹುಕ್ಕೇರಿ ಅರ್ಬನ್ ಕೋ&ಆಪ್ ಬ್ಯಾಂಕಿನ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅನುಮತಿ ಪಡೆದಿದ್ದು, ಜನರು ನಂಬಿಕೆಯಿಂದ ವ್ಯವಹರಿಸಬಹುದು. ಜನರಿಗೆ ಉತ್ತಮ ಸೇವೆ ನೀಡುವುದು ಗುರಿಯಾಗಿದೆ ಎಂದರು.
ಶಾಖೆ ಸಲಹಾ ಸಮಿತಿ ಅಧ್ಯ ಎಸ್.ಆರ್.ಪಾಟೀಲ, ನಿವತ್ತ ಪ್ರಾಂಶುಪಾಲ ಶ್ರೀಕಾಂತ ದಳವಾಯಿ ಮಾತನಾಡಿದರು. ಉತ್ತಮ ಗ್ರಾಹಕರಾದ ಸುರೇಶ ಪತ್ತಾರ, ನಾಗನಗೌಡ ಪಾಟೀಲ, ಶಂಕರ ಇಟಗಿ ಅವರನ್ನು ಗೌರವಿಸಲಾಯಿತು. ಸುನೀಲ ಸಾಣಿಕೊಪ್ಪ, ಬಸವರಾಜ ಶಡೆಗಾಳಿ, ಪ್ರಭು ಸಾಂಬಾರೆ, ಗುರುಲಿಂಗಪ್ಪ ಗಂಧ, ಶಿವಾನಂದ ನೂಲಿ, ಮಲ್ಲಿಕಾರ್ಜುನ ತೇರಣಿ, ಶಂಕರಗೌಡ ಪಾಟೀಲ, ರಾಜಕುಮಾರ ಬಾಗಲಕೋಟ, ಮಲ್ಲಿಕಾರ್ಜುನ ಕೋಟ್ಯಾಗೋಳ, ಕಾಡಪ್ಪ ಬಂದಾಯಿ ಇತರರಿದ್ದರು. ಪ್ರಧಾನ ವ್ಯವಸ್ಥಾಪಕ ಕೆ.ಬಿ.ಬಂದಾಯಿ ನಿರೂಪಿಸಿದರು. ಬಸವರಾಜ ಗುಳ್ಳ ವಂದಿಸಿದರು.