ಗ್ರಾಹಕರಲ್ಲೇ ದೇವರನ್ನು ಕಾಣುತ್ತಿರುವ ಶ್ರೀ ಗುರುಕೃಪ ಏಜೆನ್ಸೀಸ್

GURUKRUPA BUILDING PHOTO
Published on

ಚಿತ್ರದುರ್ಗ: ಕೋಟೆನಗರಿಯ ಶ್ರೀ ಗುರುಕೃಪ ಏಜೆನ್ಸೀಸ್ ಗುಣಮಟ್ಟದ ವಸ್ತು ಹಾಗೂ ಉತ್ತಮ ಸರ್ವೀಸ್‌ಗೆ ಹೆಸರಾಗಿದ್ದು, ಒಂದೇ ಸೂರಿನಡಿ ಹತ್ತಾರು ಪ್ರತಿಷ್ಠಿತ ಕಂಪನಿಗಳ ಎಲೆಕ್ಟ್ರಾನಿಕ್ಸ್ ವಸ್ತುಗಳು ಇಲ್ಲಿ ಲಭ್ಯ. ಕಳೆದ ಎಂಟೊಂಬತ್ತು ವರ್ಷಗಳಿಂದ ಗ್ರಾಹಕರಲ್ಲೇ ದೇವರನ್ನು ಕಾಣುತ್ತ ಜಿಲ್ಲಾದ್ಯಂತ ಅನೇಕರ ಮನಗೆದ್ದಿದೆ.

ವಾಸವಿ ಮಹಲ್ ರಸ್ತೆಯಲ್ಲಿರುವ ಗುರುಕೃಪ ಶೋರೂಂನಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬಯಸಿದ ಬ್ರಾೃಂಡೆಡ್ ಕಂಪನಿಗಳ ವೈವಿಧ್ಯಮಯ ವಸ್ತುಗಳಿವೆ. ಎಸಿ, ವಾಷಿಂಗ್ ಮಷಿನ್, ಕೂಲರ್, ಟಿವಿ, ಗೀಸರ್, ವಾಟರ್‌ಪ್ಯೂರಿಫೈ ಒಳಗೊಂಡು ಇತರ ವಸ್ತುಗಳು ಗ್ರಾಹಕರ ಜೇಬಿಗೆ ತಕ್ಕಂತೆ ಲಭ್ಯವಾಗಲಿವೆ.

ನಾಡ, ರಾಷ್ಟ್ರೀಯ ಹಾಗೂ ಇನ್ನಿತರ ಹಬ್ಬಗಳು ಅಷ್ಟೇ ಅಲ್ಲದೆ, ವಿಶೇಷ ಸಂದರ್ಭಗಳಲ್ಲಿ ಆನ್‌ಲೈನ್ ದರದಲ್ಲೇ ಖರೀದಿಸಲು ಅವಕಾಶ ಕಲ್ಪಿಸಿದೆ. ಒಮ್ಮೆ ಶೋರೂಂ ಒಳ ಹೊಕ್ಕರೆ ಗ್ರಾಹಕರು ಬರಿಗೈಲಿ ಮರಳಿದ್ದಿಲ್ಲ. ನಮ್ಮ ವಹಿವಾಟು ವೃದ್ಧಿಯಲ್ಲಿ ಗ್ರಾಹಕರ ಪಾತ್ರ ಪ್ರಮುಖವಾಗಿದ್ದು, ಅವರ ವಿಶ್ವಾಸ ಉಳಿಸಿಕೊಂಡು ಬಂದಿದ್ದೇವೆಂಬುದು ಮಾಲೀಕರ ಮಾತು.

ಐಎಫ್‌ಬಿ, ಬಾಷ್, ಲೊಯ್ಡ, ಕೆಂಟ್, ಸ್ಯಾಮ್‌ಸಂಗ್, ಗೋದ್ರೇಜ್, ವರ್ಲ್‌ಪೂಲ್, ಸೋನಿ, ಡೈಕಿನ್, ಬ್ಲೂ ಸ್ಟಾರ್, ಸಿಂಫೋನಿ ಸೇರಿ ಬಯಸಿದ ಕಂಪನಿಗಳ ವಸ್ತುಗಳನ್ನು ಖರೀದಿಸಬಹುದು. ಮನಸ್ಸಿಗೆ ಮುದ ನೀಡುವ ವಿವಿಧ ವರ್ಣಗಳಲ್ಲೂ ದೊರಕಲಿವೆ.

12 ಸಾವಿರ ರೂ. ಗಳಿಂದ 1.10 ಲಕ್ಷ ರೂ. ದರದ 32ರಿಂದ 55, 65 ಇಂಚು ಗಾತ್ರದ ಟಿವಿಗಳು ಇಲ್ಲಿ ದೊರೆಯುತ್ತವೆ. ಸೆಮಿ ಆಟೋಮ್ಯಾಟಿಕ್, ಆಟೋಮ್ಯಾಟಿಕ್ ಫ್ರಂಟ್ ಹಾಗೂ ಟಾಪ್ ಲೋಡ್ ವಾಷಿಂಗ್ ಮಷಿನ್‌ಗಳನ್ನು 10,990 ರೂ.ಗಳಿಂದ 50-70 ಸಾವಿರ ರೂ.ವರೆಗೂ ಖರೀದಿಸಬಹುದಾಗಿದೆ.

ಸಿಂಗಲ್, ಡಬಲ್ ಡೋರ್, ಸೈಡ್ ಬೈ ಸೈಡ್ ಫ್ರಿಜ್‌ಗಳು 13 ಸಾವಿರ ರೂ.ಗಳಿಂದ 70-80 ಸಾವಿರ ರೂ., ವಾಟರ್ ಪ್ಯೂರಿಫೈಗಳು 13-14 ಸಾವಿರ ರೂ. ಗಳಿಂದ 28 ಸಾವಿರ ರೂ., 2 ಲೀಟರ್‌ನಿಂದ 25 ಲೀಟರ್‌ವರೆಗಿನ ವಿ-ಗಾರ್ಡ್ ವಾಟರ್ ಹೀಟರ್ ಗೀಸರ್‌ಗಳು ನಾಲ್ಕೈದು ಸಾವಿರ ರೂ. ಗಳಿಂದ 15 ಸಾವಿರಕ್ಕೂ ಅಧಿಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪರ್ಸನಲ್, ದೊಡ್ಡ ಕೂಲರ್, ಕುಕ್‌ಟಾಪ್, ಮೆಕ್ರೋ ಒವೆನ್ ಸೇರಿ ಅನೇಕ ವಸ್ತುಗಳಿವೆ.

ಸರ್ವೀಸ್‌ಗೆ ಹೆಚ್ಚು ಆದ್ಯತೆ
ಸ್ಮರ್ಧಾತ್ಮಕ ದರ, ಗುಣಮಟ್ಟದ ಜತೆ ಸರ್ವೀಸ್‌ಗೆ ನುರಿತ ಸಿಬ್ಬಂದಿ ತಂಡ ಹೊಂದಿದೆ. ಆದ್ದರಿಂದ ಗ್ರಾಹಕರು ನಮ್ಮನ್ನು ಅರಸಿ ಬರುತ್ತಾರೆ. ವಾರಂಟಿ ಅವಧಿಯ ಒಳಗಡೆ ಏನಾದರೂ ಸಮಸ್ಯೆಯಾದರೆ, ಸಂಬಂಧಿಸಿದ ಕಂಪನಿಗಳ ಸರ್ವೀಸ್ ಸಿಬ್ಬಂದಿ ಮನೆ ಬಾಗಿಲಿಗೆ ಬರಲಿದ್ದಾರೆ. ಎಲ್ಲ ಉತ್ಪನ್ನಗಳನ್ನೂ ಭೌತಿಕ ಮತ್ತು ಆನ್‌ಲೈನ್ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ದರಕ್ಕೆ ಸವಾಲು ಹಾಕಿ ಮಾರಾಟ ಮಾಡುತ್ತಿರುವ ಹೆಗ್ಗಳಿಕೆ ನಮ್ಮದು ಎನ್ನುತ್ತಾರೆ ಮಾಲೀಕರು.

ಲೈಬರ್ ಬ್ರಾೃಂಡ್ ಫ್ರಿಜ್ ಲಭ್ಯ
ಈ ಬಾರಿ ಜರ್ಮನ್‌ನ ಪ್ರಸಿದ್ಧ ಕಂಪನಿಯ ಲೈಬರ್ ಬ್ರಾೃಂಡ್‌ನ ಫ್ರಿಜ್ ಕೂಡ ಪ್ರಸ್ತುತ ಪಡಿಸುತ್ತಿದ್ದು, 10 ವರ್ಷ ವಾರಂಟಿ ಒಳಗೊಂಡಿದೆ. ಬರ ಎದುರಾಗಿದ್ದರೂ ವ್ಯಾಪಾರದಲ್ಲಿ ವ್ಯತ್ಯಾಸ ಉಂಟಾಗಿಲ್ಲ. ಉತ್ತಮ ಮಳೆ-ಬೆಳೆ ಆಗಿದ್ದರೆ, ನಿರೀಕ್ಷೆಗಿಂತ ಚೆನ್ನಾಗಿಯೇ ವಹಿವಾಟು ನಡೆಯುತ್ತಿತ್ತು ಎಂಬುದು ಸಚಿನ್ ಅವರ ಅಭಿಪ್ರಾಯ.

ದೀಪಾವಳಿ ಅಂಗವಾಗಿ ಗ್ರಾಹಕರು ಬಯಸಿದ ವಸ್ತುಗಳ ಮೇಲೆ ದರಕ್ಕೆ ಅನುಗುಣವಾಗಿ ಶೇ. 2ರಿಂದ ಶೇ.20ರಷ್ಟು ಕ್ಯಾಶ್ ಬ್ಯಾಕ್ ಸೌಲಭ್ಯವಿದೆ. ಜತೆಗೆ ಹೆಚ್ಚುವರಿ ವಾರಂಟಿ ನೀಡಲಾಗುತ್ತಿದೆ. ವಿವಿಧ ಹಣಕಾಸು ಕಂಪನಿಗಳಿಂದ ಸುಲಭ ಕಂತಿನ ಸಾಲ-ಸೌಲಭ್ಯ ಕೂಡ ದೊರೆಯಲಿದೆ. ನಿಗದಿತ ವಸ್ತುಗಳ ಖರೀದಿ ಮೇಲೆ 1 ತಿಂಗಳ ಇಎಂಐ ಕಂತು ಉಚಿತವಿದೆ. ಜಿಲ್ಲೆಯ ಯಾವುದೇ ಮೂಲೆಗಾದರೂ ಉಚಿತ ಡೆಲಿವರಿ ನೀಡಲು ಬದ್ಧ. ಹಬ್ಬವಷ್ಟೇ ಅಲ್ಲದೆ, ಇತರ ದಿನಗಳಲ್ಲೂ ಗ್ರಾಹಕ ಸ್ನೇಹಿಯಾಗಿದ್ದೆವೆ.ಎಂ.ಎಚ್.ಸಚಿನ್, ಶ್ರೀಗುರುಕೃಪ ಏಜೆನ್ಸೀಸ್ ಮಾಲೀಕ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net