ನಾವಡರ ಗ್ರಾಹಕ ಸ್ನೇಹಿ ನಡವಳಿಕೆ ಅನುಕರಣೀಯ

byn
Published on

ಬೈಂದೂರು: ನಿವೃತ್ತ ಯೋಧರೂ, ಬರಹಗಾರರಾಗಿಯೂ ಬೈಂದೂರು ಪರಿಸರದಲ್ಲಿ ಮನೆಮಾತಾಗಿರುವ ಬೈಂದೂರು ಚಂದ್ರಶೇಖರ ನಾವಡರ ಶಿಸ್ತು, ಸ್ನೇಹಪರ ವ್ಯಕ್ತಿತ್ವ, ವೃತ್ತಿಪರತೆ ಸಮಾಜಕ್ಕೆ ಹಾಗೂ ಯುವ ಉದ್ಯೋಗಿಗಳಿಗೆ ಆದರ್ಶವಾಗಬೇಕು. ಶಾಖೆಗೆ ಬರುವ ಗ್ರಾಹಕರನ್ನು ಪ್ರೀತಿಯಿಂದ ಆದರಿಸಿ ಮಾತನಾಡುವ ಅವರ ಗ್ರಾಹಕ ಸ್ನೇಹಿ ನಡವಳಿಕೆ ಅನುಕರಣೀಯ ಎಂದು ಉದ್ಯಮಿ ಕಂಚಿಕಾನ್ ರವೀಂದ್ರ ಕಿಣಿ ಶ್ಲಾಘಿಸಿದರು.

ಯೂನಿಯನ್ ಬ್ಯಾಂಕ್ ಬೈಂದೂರು ಶಾಖೆಯಲ್ಲಿ ಸೇವೆಯಿಂದ ವಯೋನಿವೃತ್ತಿ ಹೊಂದುತ್ತಿರುವ ಉದ್ಯೋಗಿ ಚಂದ್ರಶೇಖರ ನಾವಡರ ವಿದಾಯ ಸಮಾರಂಭದಲ್ಲಿ ಮಾತನಾಡಿದರು.

ಸಾಹಿತಿ ಪುಂಡಲೀಕ ನಾಯಕ್ ಮಾತನಾಡಿ, ನಾವಡರು ಸಾಹಿತ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೈಂದೂರು ಭಾಗದಲ್ಲಿ ಗುರುತಿಸಲ್ಪಟ್ಟಿದ್ದಾರೆ. ತಮ್ಮ ದಕ್ಷತೆ ಮತ್ತು ಬದ್ಧತೆಯಿಂದ ನಾವಡರು ಎಲ್ಲರಿಗೂ ಪ್ರಿಯರಾಗಿದ್ದರು. ವೃತ್ತಿಯ ಜತೆಯಲ್ಲಿ ಪ್ರವೃತ್ತಿಗೂ ಸಮಯ ಹೊಂದಿಸಿಕೊಂಡು ತೊಡಗಿಸಿಕೊಂಡಿರುವುದು ಖುಷಿ ಕೊಡುವ ವಿಚಾರ ಎಂದರು.

ಗ್ರಾಹಕ ಸುರೇಶ ಗಾಣಿಗ ಮಾತನಾಡಿದರು. ಶಾಖೆ ಉಪ ಪ್ರಬಂಧಕ ಗಣಪತಿ ಭಟ್ ಪ್ರಾಸ್ತಾವಿಸಿದರು. ಪ್ರಬಂಧಕ ಆತ್ರೇಯ ಪ್ರಭು ಚಂದ್ರಶೇಖರ ನಾವಡ ದಂಪತಿಗೆ ಬೆಳ್ಳಿಯ ಸ್ಮರಣಿಕೆ ನೀಡಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net