ಕಲಬುರಗಿ: ಮನೆಗೆ ನೀರು ತರಲು ಕೊಳವೆಬಾವಿ ಮೋಟಾರ್ ಚಾಲು ಮಾಡಿ ವೈರ್ ತೆಗೆಯುವಾಗ ವಿದ್ಯುತ್ ತಗುಲಿ ಯುವಕ ಮೃತಪಟ್ಟ ಘಟನೆ ಶಿವಾಜಿ ನಗರದಲ್ಲಿ ನಡೆದಿದೆ. ರಾಹುಲ್ ಆಲೂರೆ (೨೨) ಮೃತಪಟ್ಟವ. ಮೃತನ ಸಹೋದರ ಸುನೀಲ ಆಲೂರೆ ನೀಡಿದ ದೂರಿನಂತೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.