

ಕಾಸರಗೋಡು : ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ 4ನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ, ಸಂಸ್ಕೃತಿ ಉತ್ಸವ ಮೇ 3ರಂದು ಬೆಳಗ್ಗೆ 9ರಿಂದ ಕಾಸರಗೋಡು ಸೀತಾಂಗೋಳಿಯ ಅಲಯನ್ಸ್ ಸಭಾಭವನದಲ್ಲಿ ಜರುಗಲಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಸೀತಾಂಗೋಳಿ ಕ್ಲಬ್ ಕಚೇರಿಯಲ್ಲಿ ಜರುಗಿತು. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧ್ಯಕ್ಷ ರವಿ ನಾಯ್ಕಪು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬ್ಲಾಕ್ ಪಂಚಾಯಿತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ, ಪುತ್ತಿಗೆ ಗ್ರಾಪಂ ಮಾಜಿ ಉಪಾಧ್ಯಕ್ಷ ಜಯಂತ ಪಾಟಾಳಿ, ಧಾರ್ಮಿಕ-ಸಾಮಾಜಿಕ ಮುಖಂಡ ರಾಮಪ್ಪ ಮಂಜೇಶ್ವರ, ಮಹಾಲಿಂಗ ಕೆ., ಅಪ್ಪಣ್ಣ ಸೀತಾಂಗೋಳಿ, ಕೃಷ್ಣದಾಸ್ ಡಿ, ಮಾನ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು. ವಕೀಲ ಥಾಮಸ್ ಡಿಸೋಜ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ವಂದಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷರಾಗಿ ಹಿರಿಯ ಸಾಮಾಜಿಕ-ಧಾರ್ಮಿಕ ಮುಂದಾಳು, ಉದ್ಯಮಿ ಕೆ.ಕೆ.ಶೆಟ್ಟಿ ಕುತ್ತಿಕ್ಕಾರು ಅವರನ್ನು ಆಯ್ಕೆ ಮಾಡಲಾಯಿತು. ಉದ್ಯಮಿ ಶಿವಶಂಕರ ನೆಕ್ರಾಜೆ ಕಾರ್ಯಾಧ್ಯಕ್ಷರು, ಸುಕುಮಾರ ಕುದ್ರೆಪ್ಪಾಡಿ, ಜಯಂತ ಪಾಟಾಳಿ, ಡಿ.ಶಂಕರ ಉಪಾಧ್ಯಕ್ಷರು, ವಕೀಲ ಥಾಮಸ್ ಡಿಸೋಜ ಪ್ರಧಾನ ಸಂಚಾಲಕ, ರಾಮಪ್ಪ ಮಂಜೇಶ್ವರ, ಕೃಷ್ಣದಾಸ್ ಡಿ. ಸಂಚಾಲಕರು, ಶ್ರೀಕಾಂತ್ ನೆಟ್ಟಣಿಗೆ ಕೋಶಾಧಿಕಾರಿ, ಎ.ಆರ್.ಸುಬ್ಬಯ್ಯಕಟ್ಟೆ, ಪ್ರೊ.ಶ್ರೀನಾಥ್ ಹಣಕಾಸು ಸಮಿತಿ ಸಂಚಾಲಕರು, ಮಹಾಲಿಂಗ ಕೆ. ಆಹಾರ, ಅಪ್ಪಣ್ಣ ಸೀತಾಂಗೋಳಿ, ಪವನ್ ಶೋಭಯಾತ್ರೆ, ರವಿ ನಾಯ್ಕಪು, ಗಂಗಾಧರ ಯಾದವ್, ರಾಜೇಶ್ ಕುದ್ರೆಪ್ಪಾಡಿ ವೇದಿಕೆ, ಅಖಿಲೇಶ್ ನಗುಮುಗಮ್, ಪುರುಷೋತ್ತಮ ಭಟ್, ರತನ್ ಹೊಸಂಗಡಿ, ಜಾನ್ ಡಿಸೋಜ ಕಯ್ಯರು ಪ್ರಚಾರ, ರಚನಾ ಸಂಸ್ಥೆ ಕುದ್ರೆಪ್ಪಾಡಿ ಅಲಂಕಾರ, ರವಿ ನಾಯ್ಕಪು, ಶೋಭಿತ್ ಸಾಂಸ್ಕೃತಿಕ, ರಂಜಿತ್, ಸತೀಶ್ ಸ್ವಯಂಸೇವಕ, ಶಿಸ್ತು, ಮಾನ ಮಾಸ್ಟರ್ ಅವರನ್ನು ಸ್ವಾಗತ ಕೌಂಟರ್ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ಧರ್ಮಸ್ಥಳ ಸ್ವ ಸಹಾಯ ಸಂಘ, ಶೌರ್ಯ ಘಟಕ, ಸಂತೋಷ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್, ರಚನಾ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್, ವಿವಿಧ ಕುಟುಂಬಶ್ರೀ ಘಟಕಗಳನ್ನು ವಿವಿಧ ಸಮಿತಿಗಳಲ್ಲಿ ಒಳಪಡಿಸಲಾಯಿತು.