

ಮೂಲ್ಕಿ: ಶೈಕ್ಷಣಿಕ ಮತ್ತು ಸಾವಾಜಿಕ ಕಾರ್ಯಕ್ರಮಗಳ ಮೂಲಕ ಸವಾಜದ ಪ್ರತಿಯೊಬ್ಬರಿಗೂ ಸವಲತ್ತು ಒದಗಿಸಲು ಪ್ರಯತ್ನಿಸುತ್ತಿರುವ ಸಂಸ್ಥೆಯ ಕಾರ್ಯವೈಖರಿ ಶ್ಲಾನೀಯ ಎಂದು ಸುರತ್ಕಲ್ ಅಗರಿ ಸಂಸ್ಥೆ ವಾಲೀಕ ಉದ್ಯಮಿ ಅಗರಿ ರಾವೇಂದ್ರ ರಾವ್ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 28ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ವಾತನಾಡಿದರು.
ಮಂಗಳೂರು ನೆಹರು ಯುವ ಕೇಂದ್ರದ ಆಡಳಿತಾಧಿಕಾರಿ ಜಗದೀಶ್ ಕೆ ಉದ್ಘಾಟಿಸಿದರು.ಈ ಸಂದರ್ಭ ಸಾಧಕ ವಿದ್ಯಾರ್ಥಿಗಳಾದ ಧ್ರುವ ಶ್ರಿಯಾನ್, ವಿಶಾಲ್ ಕೆ, ತ್ರಿಶಾ ಎಸ್ ಸುವರ್ಣ, ಅತ್ವಿಕ್ ಆರ್ ಶೆಟ್ಟಿ, ವ್ಯಾಸಕೃಷ್ಣ ಎಸ್ ರಾವ್, ರಿಜ್ಮಾ ಫಾತಿವಾ, ದಿಶಾ, ನಿಧಿ ಯು ಕುಲಾಲ್, ದೀಕ್ಷಾ.ಆರ್, ಸಿರಿನ್ ಕರಿಷ್ಮಾ, ಸ್ನೇಹಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕರಾಟೆ ಸಾಧಕರು, ದಾನಿಗಳು ಹಾಗೂ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ ಎಸ್.ಪೂಜಾರಿ ಅವರನ್ನು ಗೌರವಿಸಲಾಯಿತು.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಉದ್ಯಮಿ ಹರಿಪ್ರಸಾದ್ ಶೆಟ್ಟಿ ತೋಕೂರುಗುತ್ತು ಬೆಂಗಳೂರು, ಗುತ್ತಿಗೆದಾರ ವಿಜಯಕುವಾರ್ ಮಿತ್ರಪಟ್ನ ಮುಕ್ಕ, ಉದ್ಯಮಿ ಪ್ರವೀಣ್ ಕುವಾರ್ ಬೊಳ್ಳೂರು, ಸುನೀಲ್ ಡಿ ರೈ ಮಂಗಳೂರು, ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ನ ಗೌರವಾಧ್ಯಕ್ಷ ಪ್ರಶಾಂತ್ ಬೇಕಲ್, ಅಧ್ಯಕ್ಷ ದೀಪಕ್ ಸುವರ್ಣ, ಮಹಿಳಾ ಕಾರ್ಯಾಧ್ಯಕ್ಷೆ ಯಶೋದಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಸುರೇಶ್ ಶೆಟ್ಟಿ, ಸಂತೋಷ್ ದೇವಾಡಿಗ, ಗೀತಾ ಸದಾನಂದ ನಿರೂಪಿಸಿದರು. ಸಂತೋಷ್ ದೇವಾಡಿಗ ವಂದಿಸಿದರು.