

ವಿದ್ಯಾರ್ಥಿಗಳು ಸೋಲಿನಿಂದ ಎದೆಗುಂದ ಬಾರದು, ಸೋಲೆಂಬುದನ್ನು ಗೆಲುವಿಗೆ ಮೆಟ್ಟಿಲಾಗಿ ಸ್ವೀಕರಿಸಿಕೊಳ್ಳಬೇಕು. ನಿರಂತರ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎಂದು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ವಿ.ಕೆ. ವಿಟ್ಲ ಹೇಳಿದರು.
ವಿಟ್ಲ ಸುವರ್ಣ ರಂಗ ಮಂದಿರದಲ್ಲಿ ವಿಟ್ಠಲ ಎಜುಕೇಶನ್ ಸೊಸೈಟಿಯ ವಿಟ್ಠಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಸುರತ್ಕಲ್ ಗೋವಿಂದ ದಾಸ ಕಾಲೇಜು ಉಪನ್ಯಾಸಕಿ ಡಾ.ಸುಧಾ ಚಂದ್ರಶೇಖರ ಶೆಟ್ಟಿ ಮಾತನಾಡಿ, ಪ್ರತಿ ವಿದ್ಯಾರ್ಥಿಯು ಕಲಿತ ಶಾಲೆಯನ್ನು, ಕಲಿಸಿದ ಗುರುಗಳನ್ನು ಮರೆಯಬಾರದು. ಕಲಿತ ಶಾಲೆಗೆ ತನ್ನ ಕೈಲಾದ ಸಹಾಯವನ್ನು ಮಾಡುತ್ತಾ ಶಾಲೆಯ ಋಣವನ್ನು ತೀರಿಸಲು ಪ್ರಯತ್ನಿಸಬೇಕು ಎಂದರು.
ವಾರ್ಷಿಕೋತ್ಸವದ ಉದ್ಘಾಟನೆಯನ್ನು ಸಂಸ್ಥೆಯ ಗೌರವಾಧ್ಯಕ್ಷ ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ನಡೆಸಿದರು. ವಿಠಲ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಅಲ್ಫಾನ್ಸ್ ಸಿಲ್ವೆಸ್ಟರ್ ಮಸ್ಕರೇನ್ಹಸ್ ಅಧ್ಯಕ್ಷತೆ ವಹಿಸಿದ್ದರು. ವಿವಿಧ ದತ್ತಿನಿ? ಬಹುಮಾನಗಳನ್ನು ವಿತರಣೆ ಮಾಡಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿಟ್ಠಲ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಐಟಿಐ ಪ್ರಾಂಶುಪಾಲ ರಮೇಶ್ ರೈ, ಸದಸ್ಯರಾದ ನಿತ್ಯಾನಂದ ನಾಯಕ್, ರವಿಪ್ರಕಾಶ್, ಪದ್ಮಯ್ಯ ಗೌಡ, ಸದಾಶಿವ ಬನ, ಆಡಳಿತಾ?ಕಾರಿ ಪ್ರಶಾಂತ್ ಚೊಕ್ಕಾಡಿ, ನಿವೃತ್ತ ಉಪ ಪ್ರಾಂಶುಪಾಲ ಎಚ್.ಸುಬ್ರಹ್ಮಣ್ಯ ಭಟ್, ವಿದ್ಯಾರ್ಥಿ ಸಂಘದ ಪದಾ?ಕಾರಿಗಳಾದ ತೇಜಸ್ವಿನಿ, ಪವನ್ ಕುಮಾರ್ ಉಪಸ್ಥಿತರಿದ್ದರು.
ಕೋಶಾ?ಕಾರಿ ಬಾಬು ಕೊಪ್ಪಳ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ ವರದಿ ವಾಚಿಸಿದರು. ಅಧ್ಯಾಪಕ ಶ್ರೀಹರಿ ಶರ್ಮ ವಂದಿಸಿದರು. ಶಂಕರನಾರಾಯಣ ಪ್ರಸಾದ್ ನಿರೂಪಿಸಿದರು. ಮೋಹನ್, ರಾಜಶೇಖರ, ಗೀತಾ, ವಾಣಿ ವಿ., ವೀಣಾದೇವಿ, ಜೀವನ್ಯಾ ಮತ್ತು ಆಶಾ ಸಹಕರಿಸಿದರು.